Tuesday, March 6, 2018

Verity 22 - ಸಿದ್ಧ ಸರ್ಕಾರ

ಒಂದಾನೊಂದು ಕಾಲದಲ್ಲಿ, ಒಂದಾನೊಂದು ರಾಜ್ಯದಲ್ಲಿ, ಅತ್ಯಂತ ನೆಮ್ಮದಿಯಿಂದ ಜೀವಿಸುವ ವ್ಯಕ್ತಿ ಓರ್ವನಿದ್ದ. ಅದು ಹೇಗೋ, ಆ ರಾಜ್ಯವನ್ನಾಳುವ ರಾಜನಿಗೆ, ಈ ವಿಷಯ ತನ್ನ ಬೇಹುಗಾರರಿಂದ ತಿಳಿದುಹೋಯಿತು. ಆ ಮನುಷ್ಯನ ನೆಮ್ಮದಿ ಹೇಗೆ ಕೆಡಿಸಲು ಸಾಧ್ಯವೋ ಎಂದು ಯೋಚಿಸಲು ತೊಡಗಿದ ರಾಜ! ಮುಂದಿನ ಕಥೆ ಇಂದಿಗೂ ಪ್ರಸ್ತುತ. ನೀವೇ ಊಹಿಸಿಕೊಳ್ಳಿ. ರಾಜನಿಗೆ ಇದ್ಯಾವ ಲೆಕ್ಕ. ಆತನ ನೆಮ್ಮದಿ ಕೆಡಿಸಿ ನೆಮ್ಮದಿಯಾಗಿದ್ದ ರಾಜ. 

ನಮ್ಮ ಸಿದ್ಧ ಸರ್ಕಾರ ಕೂಡ ಜನರ ನೆಮ್ಮದಿಯನ್ನು, ಭಾವನೆಗಳನ್ನು ಹಾಳುಕೆಡವುದರಲ್ಲಿ ಎತ್ತಿದ 'ಕೈ'. ತಮ್ಮ ವೋಟಬ್ಯಾಂಕ್ ರಾಜಕಾರಣದಿಂದ ಕೋಮು ಸೌಹಾರ್ದತೆಯನ್ನು ಕದಡುತ್ತ, ಇತರರ ತಲೆಗೆ ಕೋಮುವಾದಿಯಂಬ ಹಣೆಪಟ್ಟಿ ಕಟ್ಟಿ, ಬುದ್ದಿಜೀವಿಗಳಿಗೆ ಗಂಜಿ ಕುಡಿಸುತ್ತಾ ನೆಮ್ಮದಿಯಾಗಿದೆ. 

ಪಟ್ಟಿಮಾಡಿದಸ್ಟು ಸಿಗುವ ಜಾತಿ ರಾಜಕಾರಣ ಮಾಡುತ್ತಿದೆ ಈ ಸಿದ್ದ ಸರ್ಕಾರ. ಒಂದು ರಾಜ್ಯದ ಮುಖ್ಯಮಂತ್ರಿ, ರಾಜ್ಯದ ಪ್ರಜೆಗಳನ್ನು ತನ್ನ ಪ್ರಜೆಗಳೆಂದು ನೋಡಬೇಕೆ ವಿನಃ ಮುಸ್ಲಿಂ, ಹಿಂದೂ, ಲಿಂಗಾಯತ, ಕುರುಬ, ಗೌಡ, ಬ್ರಾಹ್ಮಣ ಎಂದು ಜಾತಿಯ ದೃಷ್ಟಿಯಿಂದ ನೋಡುವುದು ಎಷ್ಟು ಸಮಂಜಸ? ಬಡವರಿಗೆ, ಇಲ್ಲದೇ ಇರುವವರಿಗೆ ಭಾಗ್ಯಗಳನ್ನು ಕರುಣಿಸಿದರೆ ಸರಿಯೋ? ಅಥವಾ ಒಂದು ಕೋಮಿಗೆ ಮಾತ್ರ ಭಾಗ್ಯಗಳನ್ನು ಕರುಣಿಸಿದರೆ ಸರಿಯೋ? ಈಗಿನ ಹೊಸ ಸುದ್ದಿಯ ಪ್ರಕಾರ, ಒಂದು ಶಾಲೆಯ ಅನುದಾನವನ್ನು ಆ ಶಾಲೆ ಹಿಂದೂ ಮುಖಂಡರೊಬ್ಬರ ವ್ಯಾಪ್ತಿಗೆ ಬರುವ ಕಾರಣ ಕಿತ್ತುಕೊಂಡ ಸರ್ಕಾರ, ಈಗ ಬರೋಬ್ಬರಿ ೨೦ ಕೋಟಿ ತೆರಿಗೆ ಹಣವನ್ನು ಮುಸ್ಲಿಂ ಶಾಲೆಗೆ ನೀಡಿದೆ. ಇದು ಯಾವ ಸೀಮೆ ನ್ಯಾಯ ಸ್ವಾಮಿ? ಹಿಂದುಗಳಿಗೆ ಮುಸ್ಲಿಮರ ಮೇಲೆ ಯಾವ ದ್ವೇಷಾನೂ ಇಲ್ಲ, ಮುಸ್ಲಿಮರಿಗೆ ಕೂಡ, ಹಿಂದೂಗಳ ಮೇಲೆ ಯಾವ ದ್ವೇಷಾನೂ ಇಲ್ಲ. ಅವರವರ ಪಾಡಿಗೆ ಅವರಿರುವಾಗ, ಶಾಂತಿಯನ್ನು ಕದಡಲು, ಓಲೈಕೆ ರಾಜಕಾರಣ ಮಾಡಿ, ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ಈ ಸಿದ್ಧ ಸರ್ಕಾರ ಜನರಿಗೆ ಬೇಕಾ?

No comments: