Tuesday, March 6, 2018

Verity 22 - ಸಿದ್ಧ ಸರ್ಕಾರ

ಒಂದಾನೊಂದು ಕಾಲದಲ್ಲಿ, ಒಂದಾನೊಂದು ರಾಜ್ಯದಲ್ಲಿ, ಅತ್ಯಂತ ನೆಮ್ಮದಿಯಿಂದ ಜೀವಿಸುವ ವ್ಯಕ್ತಿ ಓರ್ವನಿದ್ದ. ಅದು ಹೇಗೋ, ಆ ರಾಜ್ಯವನ್ನಾಳುವ ರಾಜನಿಗೆ, ಈ ವಿಷಯ ತನ್ನ ಬೇಹುಗಾರರಿಂದ ತಿಳಿದುಹೋಯಿತು. ಆ ಮನುಷ್ಯನ ನೆಮ್ಮದಿ ಹೇಗೆ ಕೆಡಿಸಲು ಸಾಧ್ಯವೋ ಎಂದು ಯೋಚಿಸಲು ತೊಡಗಿದ ರಾಜ! ಮುಂದಿನ ಕಥೆ ಇಂದಿಗೂ ಪ್ರಸ್ತುತ. ನೀವೇ ಊಹಿಸಿಕೊಳ್ಳಿ. ರಾಜನಿಗೆ ಇದ್ಯಾವ ಲೆಕ್ಕ. ಆತನ ನೆಮ್ಮದಿ ಕೆಡಿಸಿ ನೆಮ್ಮದಿಯಾಗಿದ್ದ ರಾಜ. 

ನಮ್ಮ ಸಿದ್ಧ ಸರ್ಕಾರ ಕೂಡ ಜನರ ನೆಮ್ಮದಿಯನ್ನು, ಭಾವನೆಗಳನ್ನು ಹಾಳುಕೆಡವುದರಲ್ಲಿ ಎತ್ತಿದ 'ಕೈ'. ತಮ್ಮ ವೋಟಬ್ಯಾಂಕ್ ರಾಜಕಾರಣದಿಂದ ಕೋಮು ಸೌಹಾರ್ದತೆಯನ್ನು ಕದಡುತ್ತ, ಇತರರ ತಲೆಗೆ ಕೋಮುವಾದಿಯಂಬ ಹಣೆಪಟ್ಟಿ ಕಟ್ಟಿ, ಬುದ್ದಿಜೀವಿಗಳಿಗೆ ಗಂಜಿ ಕುಡಿಸುತ್ತಾ ನೆಮ್ಮದಿಯಾಗಿದೆ. 

ಪಟ್ಟಿಮಾಡಿದಸ್ಟು ಸಿಗುವ ಜಾತಿ ರಾಜಕಾರಣ ಮಾಡುತ್ತಿದೆ ಈ ಸಿದ್ದ ಸರ್ಕಾರ. ಒಂದು ರಾಜ್ಯದ ಮುಖ್ಯಮಂತ್ರಿ, ರಾಜ್ಯದ ಪ್ರಜೆಗಳನ್ನು ತನ್ನ ಪ್ರಜೆಗಳೆಂದು ನೋಡಬೇಕೆ ವಿನಃ ಮುಸ್ಲಿಂ, ಹಿಂದೂ, ಲಿಂಗಾಯತ, ಕುರುಬ, ಗೌಡ, ಬ್ರಾಹ್ಮಣ ಎಂದು ಜಾತಿಯ ದೃಷ್ಟಿಯಿಂದ ನೋಡುವುದು ಎಷ್ಟು ಸಮಂಜಸ? ಬಡವರಿಗೆ, ಇಲ್ಲದೇ ಇರುವವರಿಗೆ ಭಾಗ್ಯಗಳನ್ನು ಕರುಣಿಸಿದರೆ ಸರಿಯೋ? ಅಥವಾ ಒಂದು ಕೋಮಿಗೆ ಮಾತ್ರ ಭಾಗ್ಯಗಳನ್ನು ಕರುಣಿಸಿದರೆ ಸರಿಯೋ? ಈಗಿನ ಹೊಸ ಸುದ್ದಿಯ ಪ್ರಕಾರ, ಒಂದು ಶಾಲೆಯ ಅನುದಾನವನ್ನು ಆ ಶಾಲೆ ಹಿಂದೂ ಮುಖಂಡರೊಬ್ಬರ ವ್ಯಾಪ್ತಿಗೆ ಬರುವ ಕಾರಣ ಕಿತ್ತುಕೊಂಡ ಸರ್ಕಾರ, ಈಗ ಬರೋಬ್ಬರಿ ೨೦ ಕೋಟಿ ತೆರಿಗೆ ಹಣವನ್ನು ಮುಸ್ಲಿಂ ಶಾಲೆಗೆ ನೀಡಿದೆ. ಇದು ಯಾವ ಸೀಮೆ ನ್ಯಾಯ ಸ್ವಾಮಿ? ಹಿಂದುಗಳಿಗೆ ಮುಸ್ಲಿಮರ ಮೇಲೆ ಯಾವ ದ್ವೇಷಾನೂ ಇಲ್ಲ, ಮುಸ್ಲಿಮರಿಗೆ ಕೂಡ, ಹಿಂದೂಗಳ ಮೇಲೆ ಯಾವ ದ್ವೇಷಾನೂ ಇಲ್ಲ. ಅವರವರ ಪಾಡಿಗೆ ಅವರಿರುವಾಗ, ಶಾಂತಿಯನ್ನು ಕದಡಲು, ಓಲೈಕೆ ರಾಜಕಾರಣ ಮಾಡಿ, ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ಈ ಸಿದ್ಧ ಸರ್ಕಾರ ಜನರಿಗೆ ಬೇಕಾ?

Verity 21 - ತೀರಿಹೋದ ಧಾರ್ಮಿಕ ಭಾವನೆಗಳು (Reader's response to an article)


ದಿನಾಂಕ ೯, ಆಗಸ್ಟ್ ೨೦೧೭, ವಿಶ್ವವಾಣಿ ಪತ್ರಿಕೆಯಲ್ಲಿನ 'ಮೌಢ್ಯ' ಎಂಬ ಲೇಖನಕ್ಕೆ  ನನ್ನ ಪ್ರತಿಕ್ರಿಯೆ.
(ಕೆಳಗಿನ ಲಿಂಕ್ ನಲ್ಲಿ ಮೌಢ್ಯ ಲೇಖನವಿದೆ)
http://epaper.vishwavani.news/bng/e/bng/09-08-2017/7
(ಕೆಳಗಿನ ಲಿಂಕ್ ನಲ್ಲಿ ನನ್ನ ಪ್ರತಿಕ್ರಿಯೆ)
http://epaper.vishwavani.news/bng/e/bng/11-08-2017/7

ಮೌಢ್ಯತೆ ಮೀರಿ

ತಮಗೆ ಸರಿ ಅಲ್ಲ ಅನಿಸಿದ್ದೆಲ್ಲವೂ ಮೌಢ್ಯ ಎನ್ನುವ ಈಗಿನ ಯುವ ಜನತೆಯ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಈ ಬುಧವಾರದ 'ಮೌಢ್ಯ' ಎಂಬ ಲೇಖನ .
ಹಿಂದಿನ ವಾರ ಟೀವಿ ನೋಡುತ್ತಿರುವಾಗ ಮಿಲನ ಎಂಬ ಚಲನ ಚಿತ್ರ ಪ್ರಸಾರವಾಗುತ್ತಿತ್ತು. ಒಬ್ಬ ಸ್ನೇಹಿತನಿಗೆ ಅವನ ಪ್ರೇಯಸಿಯನ್ನು ಕುಟುಂಬದ ವಿರೋಧದ ನಡುವೆಯೂ ವಿವಾಹ ಮಾಡಿಸುತ್ತಾನೆ ಹೀರೋ. ಹಾಗಂತ, ನಾವೆಲ್ಲರೂ ಅದನ್ನೇ ಮಾಡಬೇಕು ಎಂದುಕೊಳ್ಳುವುದು ಮೂರ್ಖತನ. 
ಟೀವಿಯಲ್ಲಿ ಜ್ಯೋತೀಷಿಗಳು ಏನೋ ಹೇಳುತ್ತಾ ಇದ್ದಾರೆ, ಅದನ್ನೇ ಆಚರಣೆ ಮಾಡಬೇಕು, ಇಲ್ಲಾಂದ್ರೆ ಕೇಸ್ ಹಾಕ್ತೀವಿ ಅಂತ ಯಾರಾದ್ರೂ ಹೇಳಿದ್ರಾ ಶರಧಿಯವರೇ? ಅದನ್ನು ಆಚರಿಸೋದು ಬಿಡೋದು ಅವರವರ ಇಷ್ಟ. ಕಷ್ಟ ಅನಿಸಿದರೆ ದಯವಿಟ್ಟು ನಿರ್ಲಕ್ಷಿಸಿ. 

ಧಾರ್ಮಿಕ ಆಚರಣೆಗಳ ಅಗತ್ಯವಿಲ್ಲದ ಜನರಿಗೆ ಎಲ್ಲವೂ ಒಂದು ತರಹ ಮೌಢ್ಯ. ಬೆಳಗ್ಗೆ ೬ ಗಂಟೆಗೆ ಸೂರ್ಯೋದಯವಾಗುತ್ತೆ, ಏಳು ಎಂದರೆ, ಸೂರ್ಯ ಅಲ್ಲೇ ಇರ್ತಾನೆ, ಭೂಮಿ ತಿರುಗಿದರೆ ನಾನೇನು ಮಾಡ್ಬೇಕಮ್ಮ, ೧೦ ಗಂಟೆ ತನಕ ಎಬ್ಬಿಸಬೇಡ ಎನ್ನೋ ಮಕ್ಕಳು ತಡ ರಾತ್ರಿ ೧ ಗಂಟೆಯವರೆಗೆ ಫೇಸಬುಕ್ನಲ್ಲೋ, ವಾಟ್ಸಾಪ್ಪ್ನಲ್ಲೂ ಬ್ಯುಸಿ ಆಗಿರೋದು ತಾಯಿಗೆ ಹೇಗೆ ತಿಳಿಯುತ್ತದೆ? ತಪ್ಪಲ್ಲ. ಅವರ ಜೀವನ, ಅವರ ಇಷ್ಟ. ಎಲ್ಲದಕ್ಕೂ ಪರಿಮಿತಿ ಇರಲೆಂದೇ ಈ ಸಂಸ್ಕಾರ ಮತ್ತು ಆಚರಣೆಯ ಅರಿವು ಅಗತ್ಯ. 

ಈಗಿನ ಕಾಲದಲ್ಲಿ, ಮನುಷ್ಯನ ಕೈಗೆ ಮೊಬೈಲ್ ಪ್ರಪಂಚ ಬಂದಿದೆ, ಜೇಬಲ್ಲಿ ಕಾಸು ಓಡಾಡುತ್ತ ಇದೆ. ಕೈಲೊಂದು ಕೆಲಸಾನೂ ಇದೆ. ಹೀಗಿರುವಾಗ ಧಾರ್ಮಿಕ ಆಚರಣೆಗಳಿಗೆ ಯಾರು ಸಮಯ ವ್ಯರ್ಥ ಮಾಡುತ್ತಾರೆ? ಅದೇ ನೆಪದಲ್ಲಿ, ಕಂಡಿದೆಲ್ಲ ಇವರಿಗೆ ಮೌಢ್ಯ. ಸಾವಿರಾರು ವರ್ಷಗಳ ಹಿಂದೆ ಅಪಾರ ಬುದ್ದಿಜೀವಿಗಳಾದ ಋಷಿಮುನಿಗಳು ಕಂಡು ಹಿಡಿದ ಜ್ಯೋತೀಷ್ಯ ಇವರಿಗೆ ಮೌಢ್ಯ! ಇಂತವರಿಗೆ ಬೆಳಗ್ಗೆ ಗುಡ್ ಮಾರ್ನಿಂಗ್ ಹೇಳಿದರೆ, ಊಟ ಆಯ್ತಾ ಅಂತ ಕೇಳಿದರೆ ಅದು ಮೌಢ್ಯ, ಯಾಕೆ ಆ ರೀತಿ ಹೇಳಿದರೆ ಮಾತ್ರ ಬೆಳಿಗ್ಗೆ ಆಗುತ್ತದೆಯೇ? ಅದೊಂದು ನೈಸರ್ಗಿಕ ಕ್ರಿಯೆ ಅಲ್ವಾ?  ಊಟ ನಾನು ತಿಂದಿಲ್ಲ ಅಂದ್ರೆ ನೀನು ಹಾಕ್ತೀಯ, ಇಲ್ಲ ತಾನೇ, ಮತ್ತೆ ಯಾಕೆ ಕೇಳೋದು? ಎಂದು ಕೇಳಿದಂತಿದೆ ನಿಮ್ಮ ಲೇಖನದ ಹರಿತ. 

ಮೊನ್ನೆ ಪಾಪ, ಧರ್ಮಸಿಂಗ್ ತೀರಿಕೊಂಡಾಗ ಸರ್ಕಾರ ಸಂತಾಪ ಸೂಚಕ ರಜೆ ಘೋಷಿಸಿದಾಗ ಎಲ್ಲಿ ಅಡಗಿತ್ತು ಈ ನಿಮ್ಮ ಮೌಢ್ಯ ವಿರೋಧಿ ಚಟುವಟಿಕೆ? ಸಾವು ನೈಸರ್ಗಿಕ ಕ್ರಿಯೆ ಅಲ್ವಾ? ಹಾಗೇ ಹಿಂದೆ ಹೋದರೆ, ಮಂತ್ರಿಯೊಬ್ಬರ ಪುತ್ರವಿಯೋಗದ ಶೋಕವೂ ಒಂದು ತರಹ ಮೌಢ್ಯ ಅಲ್ವಾ? ಪುತ್ರವಿಯೋಗದ ಶೋಕ ಹೆತ್ತವರಿಗಷ್ಟೇ ಗೊತ್ತು, ಈ ರೀತಿ ಹೇಳಿದಕ್ಕೆ ಕ್ಷಮೆ ಇರಲಿ. ಭಾವನೆಗಳು ಸತ್ತು ಹೋದಾಗ ಮಾತ್ರ ಈ ತರಹದ ಆಲೋಚನೆಗಳು ಸುಳಿಯುತ್ತವೆ. ಅವರವರ ಬುಡಕ್ಕೆ ಬಂದಾಗ ಮಾತ್ರ ಅದು ಬೆಂಕಿ, ಇಲ್ಲದೆ ಇದ್ರೆ ಅದು ಚಳಿ ಕಾಯಿಸಿಕೊಳ್ಳಲು, ಬೇಳೆ ಬೇಯಿಸಿಕೊಳ್ಳಲು ಇರುವ ನೈಸರ್ಗಿಕ ಆನಂದ. 

ಮೌಢ್ಯ, ಮೌಢ್ಯ ಎಂದು ನಿಮ್ಮ ಧಾರ್ಮಿಕ ಭಾವನೆಗಳನೂ ಮುಚ್ಚಿಹಾಕಿಕೊಳ್ಳಿ, ನೋ ಪ್ರಾಬ್ಲಮ್, ಆದರೆ ಬೇರೆಯವರ ಭಾವನೆಗಳ್ಳನ್ನು ಚುಚ್ಚದಿರಿ.