Monday, June 28, 2010

Verity 7 - ರಾತ್ರಿಯ ದಿನ...

ಮಂಡೇ , ಟ್ಯೂಸ್ಡೇ , ವೆಡ್ನಸ್ಡೇ … ಹೀಗೆ ಯಾಕೆ ಹೆಸರು ಇಟ್ರು ಅನ್ನೋ ಯೋಚನೆ ತಲೆಯ ಒಳಗೆ ಆಕ್ಟಿವೇಟ್ ಆಯಿತು .
ಡೇ ಅಂದ್ರೆ ದಿನ ಅಂತ . ಹಾಗಾದ್ರೆ ಮನ್ ನೈಟ್, ಟ್ಯೂಸ್ ನೈಟ್ , ವೆಡ್ನಸ್ ನೈಟ್ ಅಂತ ಯಾಕೆ ಕರೆಯೋಲ್ಲ ?

‘ಹುಚ್ಚು ಮನಸ್ಸಿಗೆ 10 ಮುಖವಲ್ಲ , ಸಾವಿರ ಮುಖಗಳು ’ ಯಾರೋ ಹೇಳಿದ್ದು ನೆನಪಾಯಿತು .
ಇಂತಹ ಪ್ರಶ್ನೆಗಳು ಉದ್ಭವ ಆದಾಗಲೆಲ್ಲ , ನನ್ನೊಳಗಿನ ಇಮ್ಯಾಜಿನೇಶನ್ ಕಣ್ಣು ಒರೆಸಿಕೊಳ್ಳುತ್ತಾ ಎದ್ದು ಬಿಡುತ್ತೆ !

ಪಾಪ, ಈ ರಾತ್ರಿ ಅನ್ನೋದು ಏನು ತಪ್ಪು ಮಾಡಿತ್ತು ಹಾಗಾದರೆ? ಎಷ್ಟು ಇಸೀಯಾಗಿ ಅದನ್ನ ಇಗ್ನೋರ್ ಮಾಡಿದ್ದಾರೆ !
7 ರಾತ್ರಿಗಳೂ ಅದೇ ಪ್ರಶ್ನೆ ಕೇಳುತ್ತಿವೆಯೋ ಅನಿಸಿತು . ಅವುಗಳೆಲ್ಲ ಸೇರಿ ಸ್ಟ್ರೈಕ್ ಮಾಡಲಿಕ್ಕೆ ಅರಮ್ಬಿಸಿದರೆ ಏನ್ ಗತಿ? ಕತ್ತಲೆಯೇ ಆಗದಿದ್ದರೆ ಏನು ಮಾಡೋದು ?

ಹೌದು , ಕತ್ತಲೆಯೇ ಆಗದಿದ್ದರೆ ? ಟೈಮ್ ಹೋಗುತ್ತಾ ಇದ್ದಿದ್ದೆ ಗೊತ್ತಾಗುತ್ತಿರಲಿಲ್ಲ ! ಸೂರ್ಯ , ಇನ್ನೇನು ಡ್ಯೂಟಿ ಮುಗಿಸಬೇಕು ಎನ್ನುವಸ್ಟರಲ್ಲಿ ಮತ್ತೆ ಬೆಳಗಾಗಿ ಬಿಡುತ್ತಿತ್ತು . ಹಾಗಾಗಲು ಸಾಧ್ಯವೇ ಇಲ್ಲ ಅಂತ ನನ್ನ ರಾಶನಲ್ ಮೈಂಡ್ ಹೇಳಿತು . ಇನ್ನೊದು ಬಾಡಿಗೆ ಸೂರ್ಯನ್ನ ತಂದರೆ ? ಒಂದು ಮುಳುಗಿದಾಗ ಇನ್ನೊಂದು .

‘ಲೇ, ನನಗೇ ಬ್ಯಾಕ್ಅಪ್ ಇಡ್ತೀರಾ?’ ಸೂರ್ಯ ಕಾದು ಕೆಂಪಾಗಿ ಕೇಳಿದ. ತಲೆಗೆ ಹಾಕಿ ಕೊಂಡಿದ್ದ ‘ತಂಪು ತಂಪು ಕೂಲ್ ಕೂಲ್ ’ – ನವರತ್ನ ಆಯಿಲ್ , ಅವನ ಸುಡುವ ಕಿರಣಗಳಿಂದ ಬಿಸಿಯಾಗಿ ಹೋಯಿತು. ನನ್ನನ್ನು ಕಾಪಾಡಲು ಏನೋ ಎಂಬಂತೆ , ಕಪ್ಪು ಮೋಡಗಳು ಸೂರ್ಯನನ್ನು ಸುತ್ತುವರೆದವು . ಅವುಗಳನ್ನು , ನಾನು ಸಪೋರ್ಟ್ ಮಾಡುತ್ತಿದ್ದ ರಾತ್ರಿಗಳೇ ಕಳುಹಿಸಿದವೋ ಏನೋ ಗೊತ್ತಾಗಲಿಲ್ಲ .

ಮೋಡಗಳೆಲ್ಲ ಕರಗಿ ನೀರಾಗುವ ಮೊದಲು ಮನೆ ಸೇರಿಬಿಡಬೇಕು, ಎಂಬ ಸೂಚನೆ ಕಾಲುಗಳಿಗೆ ನಾನು ಹೇಳದೆಯೇ ದೊರೆಯಿತು . ಇನ್ನು ಎರಡೇ ಕಿಲೋಮೀಟರು, ಮನೆ ತಲುಪಲು . ಎರಡು ಕಾಲುಗಳು 1-1 ಕಿಲೋಮೀಟರು ನಡೆದರೆ ಸಾಕಾ?

ಯೋಚನೆ ದಾರಿ ತಪ್ಪುತ್ತಿದೆ ಎನ್ನುವಾಗ, ಮತ್ತೆ ಪಾಪದ ರಾತ್ರಿಗಳು ನೆನಪಾದವು. ‘ಯಾಕೆ ರಾತ್ರಿಗೆ ಸಿಗಬೇಕಾದ ಪ್ರಾಶಸ್ತ್ಯ ಸಿಗಲಿಲ್ಲ?’

‘ಅದೆಲ್ಲಾ ಇರಲಿ , ಇಷ್ಟು ದಿನ ನೀನು ಮಾಡಿದ್ದೇನು?, ನೀನೂ ಕೂಡ ರಾತ್ರಿಗಳನ್ನು ಇಗ್ನೋರ್ ಮಾಡಿದವನೇ ತಾನೆ ?’ ನನ್ನ ರಾಶನಲ್ ಮೈಂಡ್ ನನ್ನನ್ನು ಹಂಗಿಸುತ್ತ ಕೇಳಿತು.

ಒಂದು ಕ್ಷಣ ದಂಗಾಗಿ ಬಿಟ್ಟೆ . ‘ನಾನ?, ನಾನೇನು ಮಾಡಿದೆ !?’

‘ರಾತ್ರಿ ಎಲ್ಲಾ ಲೈಟ್ ಹಾಕೊಂಡು, ಕತ್ತಲೆ ಬಾರದ ಹಾಗೆ ಮಾಡಿ, ಬುಕ್ಸ್ ಓದುತ್ತ ಇರಲಿಲ್ಲಾ? ಲ್ಯಾಪ್ಟಾಪ್ ಕೈಲಿ ಹಿಡ್ಕೊಂಡು ಗೇಮ್ಸ್ ಆಡ್ತಾ ಇರಲಿಲ್ಲಾ? ಟೀವಿ ಹಾಕಿಬಿಟ್ಟು ಗಂಟೆಗಟ್ಲೆ ಸ್ಪೋರ್ಟ್ಸ್ ನೋಡ್ತಾ ಇರಲಿಲ್ಲಾ? ಇದೆಲ್ಲ ಇರಲಿ ನೀನು ಡೈಲಿ ಮಲಗೋದು ಎಷ್ಟು ಗಂಟೆಗೆ?’

ಬೇರೆ ಯಾರೋ ಕೇಳಿದ್ದರೆ 11 ಅಂತ ಹೇಳಿಬಿಡುತ್ತಿದ್ದೆನೇನೋ , ಈಗ ಪ್ರಶ್ನೆ ಕೇಳ್ತಾ ಇರೋದು ನನ್ನದೇ ಮನಸ್ಸು!

ಹೌದು , ಇತ್ತೀಚಿಗೆ ಮಧ್ಯ ರಾತ್ರಿಯ ಒಳಗೆ ಮಲಗಿದ್ದೇ ಗೊತ್ತಿಲ್ಲ. ನಾನು ಬರೀ ರಾತ್ರಿಗಳನ್ನಲ್ಲ, ನನ್ನನ್ನೇ ಮರೆತಿದ್ದೆ! ‘10 ರಿಂದ 6 ನಿದ್ರಿಸಲು ಸರಿಯಾದ ಸಮಯ’ – ಹಿರಿಯರು ಹೇಳಿದ್ದು ನೆನಪಿಗೆ ಬಂತು. ನಾನು ಯೋಗ ಕಲಿಯುತ್ತಿದ್ದಾಗ ಅಧ್ಯಾಪಕರೂ ಕೂಡ ಹಾಗೆಯೇ ಹೇಳಿದ್ದರು. ನಾನೂ ಆವಾಗ ಅದನ್ನೇ ಮಾಡುತ್ತಿದ್ದೆ. ಪರಿಣಾಮ - ಅಂದಿನ ದಿನಗಳು ಎಷ್ಟು ಕುಶಿಯಾಗಿರುತ್ತಿತ್ತು. ಎಷ್ಟು ಆರೋಗ್ಯವಾಗಿ ನಾನಿದ್ದೆ!

ನನ್ನ ತಪ್ಪು ನನಗೇ ಅರಿವಾಯಿತು. ‘ಇವತ್ತಿನಿಂದಲೇ, ಸರಿಯಾಗಿ ನಿದ್ರಿಸುತ್ತೇನೆ , ರಾತ್ರಿಗೆ ಪ್ರಾಮುಕ್ಯತೆ ಕೊಡುತ್ತೇನೆ‘ ಎಂದುಕೊಂಡೆ.
‘ಅಸ್ಟು ಮಾಡು ಸಾಕು, ನಿನಗೆ ಒಳ್ಳೆಯದಾಗುತ್ತೆ’ ಎನ್ನುತ್ತಾ ರಾತ್ರಿಗಳು ಹೊರಟವು.

‘ಈ ಹೆಸರುಗಳಿಗೆ ಏನು ಮಾಡೋದು , ಮನ್ ನೈಟ್ , ... – ಅನ್ನೋದು ಬೇಡವೇ ?’ ಎಂದು ಕೇಳಿದೆ .
ಹೊರಟಿದ್ದ ರಾತ್ರಿಗಳು ಅಲ್ಲೇ ನಿಂತು ನನ್ನ ಕಡೆ ನೋಡುತ್ತಾ ನಸು ನಕ್ಕವು …

--
ಅಭಿಜಿತ್ ದೇವ್ ಕಟ್ಟಿನಕೆರೆ, ಸಾಗರ.

4 comments:

Unknown said...

put this in english re.. so that we ppl can also read..

Loku said...

ಬಹಳ ಚೆನ್ನಾಗಿದೆ ಅಭಿ. ನಿನ್ನ ವಿಭಿನ್ನ ಯೋಚನಾ ಶೈಲಿಯನ್ನು ಮೆಚ್ಚಬೇಕು. ಈಗಿನ ಜನರೇಷನ್ ಹುಡುಗರೇ ಹಾಗೆ(24 – 30 ರ ವರೆಗಿನ ವಯಸ್ಸಿನವರು). ಮೆಜಾರಿಟಿ ಜನ ನಿದ್ದೆ ಬಿಟ್ಟು ಬೇರೆಲ್ಲ ಕೆಲಸ ಮಾಡ್ತಾರೆ. ಈ ಬಗ್ಗೆ ನಾನು ಸಾಕಷ್ಟು ಬಾರಿ ಯೋಚನೆ ಮಾಡಿರುವೆ. ಕಳದ 5-6 ವರ್ಷದಿಂದ ನಾನು 4 ರಿಂದ 5 ತಾಸು ಮಾತ್ರ ನಿದ್ದೆ ಮಾಡುತಿದ್ದೇನೆ. ಈ ಬಗ್ಗೆ ಪಶ್ಚಾತಾಪ ಹಾಗು ನನ್ನ ಬಗ್ಗೆ ನನಗೇನೇ ಅನುಕಂಪ ಇದೆ.

Shashi said...

Good Abhi...What u r telling is very much true.. I am thinking about changing my sleeping time [Of course from 10 -6] dude :)

Ragu Kattinakere said...

:) very interesting