Wednesday, July 23, 2014

Verity 17 - ಅನಿವಾರ್ಯ

ಊಟ ಮಾಡಿದ ಮೇಲೆ ಕೈ ತೊಳೆಯಬೇಕಲ್ಲಾ ಎಂದು ಟೋನಿ ಚಮಚ (ಸ್ಪೂನ್) ಉಪಯೊಗಿಸಿದ. ಊಟದ ನಂತರ, ಸ್ಪೂನ್ ತೊಳೆಯಬೇಕಾಗಿ ಬಂತು !!!  

Wednesday, August 7, 2013

Verity 16 - Soft Robbery, open letter to RBI

Subject - Banks, recruitment and Robbery....

To, RBI.

Probationary officer jobs in XYZ Bank.
150 seats!(General seats 49)
More than 4 to 5 lac people apply for that 49 seats all over India.
Application fee 250 to 400.

Just a rough calculation, if my arithmetic is not wrong, it turns to be 250*4,00,000= 10,00,00,000/- (Yes, 10 crores!)
Is this not a corrupt money? Moreover, this money belongs to jobless people.

One may argue, if fees are less, then that 4 to 5 lac people count will increase to more than 20 lac.
Well, time to introspect. Government has to improve job opportunities.

Banks should return some amount of the fee to the applicants if they cross certain cut-off marks.
Verity is, for common people - Time means struggle, strive till death!

In this greedy world, on behalf of all those who have lost money like this,
- A common man.

Sunday, July 14, 2013

Verity 15 - ಅವ್ಯಕ್ತ

July 10, A wednesday. 6pm. ಟೋನಿ ಎಂದಿನಂತೆ ಕೆಲಸ ಮುಗ್ಸಿ ಮನೆಗೆ ಹೊರಟ. ಟೋನಿ ಯಾವಾಗಲೂ ಪಬ್ಲಿಕ್ ಬಸ್ನಲ್ಲೇ ಟ್ರಾವೆಲ್ ಮಾಡ್ತಾನೆ, ಸಿಂಪಲ್ ರೀಸನ್ - ಟೋನಿಯ ಬಳಿ ಪ್ರೈವೇಟ್ ವೆಹಿಕಲ್ ಇಲ್ಲ!  As a routine, ಮಳೆ ಕೂಡ ಅಲ್ಲಲ್ಲಿ  ಬಿದ್ದು ಭೂಮಿಯಲ್ಲಿ ಇಂಗಿ ಹೋಗಿತ್ತು.

೪ ಕಿ ಮೀ ಹೋಗಲು ಅರ್ದ ಗಂಟೆ ತಗೊಂಡ ಬಸ್ಸಿನಿಂದ ಟೋನಿ ಇಳಿದಾಗ ಮತ್ತೆ ಮಳೆಗೆ ಕೆಳಬೀಳುವ ಮೂಡು ಇತ್ತು.  ಮತ್ತೊಂದು ಬಸ್ ಹತ್ತಿದರೆ ಹತ್ತು ನಿಮಿಷದಲ್ಲಿ ಮನೆ ತಲುಪಬಹುದು. ಟೋನಿ ಆ ಬಸ್ಸಿಗಾಗಿ ಕಾಯತೊಡಗಿದ. 

ಕೆಲವೊಮ್ಮೆ ಮನಸ್ಸಿನಲ್ಲಿ ಎಸ್ಟೊಂದು ವಿಷಯಗಳು ತುಂಬಿ ಟ್ರಾಫಿಕ್ ಜಾಮ್ ಆಗಿಬಿಡುತ್ತೆ!  ಆಲೋಚನೆಗಳು ಮಳೆಯಂತೆ ಬಂದು, ಹೃದಯದಲ್ಲಿ ಇಂಗಿ ಹೋಗುತ್ತೆ! ನೆನಪಿನಲ್ಲಿ ಅರಳಿ ಮರೆಯಾಗಿಹೋಗುತ್ತೆ!  ಕಣ್ಣೆಂಬ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳು ಎಸ್ಟೋ, ಅದರಲ್ಲಿ ಕೆಲವು ಕಳೆದು ಹೋಗಿವೆ, ಇರುವುದರಲ್ಲಿ ನೆನಪಾಗುವುದು ಕೆಲವೇ ಕೆಲವು.

ಟೋನಿ ಬಸ್ ಹತ್ತಿದ. ಪ್ರೈವೇಟ್ ಮಿನಿ ಬಸ್. ಸೀಟಿನಲ್ಲಿ ಕುಳಿತಾಗ houseful ಆದ ಬಸ್ ಮುಂದೆ ಚಲಿಸಿತು. ಟೋನಿ ಅಚಾನಕ್ಕಾಗಿ ಪಕ್ಕದಲ್ಲಿ ಕುಳಿತವನ ಮೊಬೈಲ್ ಫೋನ್ ನೋಡಿದ. ಓಲ್ಡ್ ನೋಕಿಯಾ ಮೊಬೈಲ್. ಆದರೆ ಅವನ ಗಮನ ಸೆಳೆದದ್ದು ಮೊಬೈಲ್ ಅಲ್ಲ. ಮೊಬೈಲ್ ಮೇಲಿನ ಸ್ಕ್ರೀನ್. ಸ್ಕ್ರೀನ್ ಮೇಲಿನ ಬರಹ. ಟೋನಿಯ ಮನಸ್ಸು ಜಾಗೃತಗೊಂಡಿತು. ಮತ್ತೊಮ್ಮೆ ಸಾಮನ್ಯವಾಗಿರುವಂತೆ ಆಕಡೆ ಈಕಡೆ ನೋಡುತ್ತಾ ಆತನ ಮೊಬೈಲ್ ನೋಡಿದ ಟೋನಿ. ಹೌದು. ತಾನು ನೋಡಿದ್ದು ನಿಜ. 

ಆತ ಸಾಮಾನ್ಯ ಡ್ರೆಸ್ ಹಾಕಿದ್ದ. ಟೋನಿಯ ಅಸ್ಟೇ ಹೈಟು. ಸ್ವಲ್ಪ ಅಗಲ. ಪ್ಯಾಂಟ್ ತೊಡೆಯ ಬಳಿ ಸ್ವಲ್ಪ ಹರಿದುಹೋಗಿತ್ತು.
ತನ್ನಷ್ಟಕ್ಕೆ ತಾನು ತನ್ನ ಮೊಬೈಲ್ ನೋಡುತ್ತಾ, ಹೊರಗೆ ಇಣುಕುತ್ತ ಇದ್ದ. ಟೋನಿ ಯೋಚಿಸಲಾರಂಬಿಸಿದ. ಸಮಯ ತುಂಬಾ ಕಡಿಮೆ ಇದೆ. ಇನ್ನು ಎರಡೇ ಸ್ಟಾಪ್. ಆತ ಯಾವುದೇ ಅಪ್ಲಿಕೇಶನ್ ಓಪನ್ ಮಾಡುತ್ತಾ ಇರಲಿಲ್ಲ. ಸುಮ್ಮನೆ ತನ್ನ ಮೊಬೈಲ್ ನೋಡ್ತಾ ಇದ್ದ, ಯಾರ ಹಂಗೂ ಇಲ್ಲದೆ. ಯಾವುದಾದರೂ ಪೊಲೀಸರಿಗೆ ತಿಳಿಸಲ? ತಿಳಿಸಿದರೂ ಅವರೇನು ಮಾಡಿಯಾರು? ಇಸ್ಟರಲ್ಲೇ ಅವರಿಗೆ ತಿಳಿದಿರಲೇ ಬೇಕು!

ನೆಕ್ಸ್ಟ್ ಸ್ಟಾಪ್ ಬಂದೇ ಬಿಟ್ಟಿತು! ಆತ  ಎಲ್ಲಿ ಇಳಿಯುತ್ತಾನೋ? ಮುಂದೆ ಏನು ಮಾಡುತ್ತಾನೋ?

ಟೋನಿ ಒಬ್ಬ ಕಾಮನ್ ಮ್ಯಾನ್. ಅವನು ತಲೆಯಲ್ಲಿ ಹುಳ ಬಿಟ್ಟುಕೊಂಡಿರೋದಕ್ಕೆ  ಕಾರಣ ಪಕ್ಕದವನ ಮೊಬೈಲ್. ಅದರ ಮೇಲೆ ಬರೆದದ್ದು. ನಮ್ಮ ಸುತ್ತಮುತ್ತಲೂ ಇರುವವರಿಂದ ನಾವು ಹೇಗೆ ಇನ್ಫ್ಲುಯೆನ್ಸ್ ಆಗುತ್ತೇವೆ ಎನ್ನೋದಕ್ಕೆ ಇದು ಕನ್ನಡಿ. ತಾನಾಯ್ತು, ತನ್ನ ಸಂಸಾರವಾಯ್ತು ಎನ್ನುವವರು ಸಮಾಜದ ಒಳ್ಳೆಯ ಪ್ರಜೆಗಳಾಗಲಾರರು.

ಟೋನಿಯ ಸ್ಟಾಪ್ ಬಂದೇ ಬಿಟ್ಟಿತು. ಭಾರವಾದ ಹೃದಯದಿಂದ ಏನೂ ಮಾಡಲಾರದ ವ್ಯಥೆಯಿಂದ ಸೀಟಿನಿಂದ ಎದ್ದ ಟೋನಿ. ಟೋನಿಯ ಹಿಂದೆ ಆ ವ್ಯಕ್ತಿಯೂ ಎದ್ದ. ಗುಡ್. ಈತ ಎಲ್ಲಿ ಹೋಗುತ್ತಾನೋ ಎಂದು ನೋಡಬಹುದು ಎಂದುಕೊಂಡ ಟೋನಿ.  ಬಸ್ ಇಳಿದ ಮೇಲೆ ಆ ವ್ಯಕ್ತಿ ಬಸ್ ಸ್ಟಾಂಡ್ ಎದುರಿನಲ್ಲಿರೋ ಮೊಬೈಲ್ ಶಾಪ್ಗೆ ಹೋಗಿದ್ದನ್ನು, ಅಲ್ಲಿ ರಿಚಾರ್ಜ್ ಸ್ಕೀಮನ್ನು ನೋಡುತ್ತಾ ಇರೋದನ್ನು 5 ನಿಮಿಷಗಳ ಕಾಲ ನೋಡಿದ ಟೋನಿ. 
ಆ ಮೊಬೈಲಿನಲ್ಲಿ ಅಂತಾದ್ದು ಏನಿತ್ತು? ಟೋನಿ ಡಿಸ್ಟರ್ಬ್ ಆಗಿದ್ದು ಮೊಬೈಲ್ ಸ್ಕ್ರೀನ್ ಬ್ಯಾಕ್ಗ್ರೌಂಡ್ ನಲ್ಲಿದ್ದ 'ಪಾಕಿಸ್ತಾನ'  ಎಂಬ ಬರಹದಿಂದ! ಟೋನಿಗೆ ಆತನ ಇಂಟೆಂಟ್ ತಿಳಿಯಬೇಕಿತ್ತು. ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕಾಗಿ ಹಪಹಪಿಸುವ ಇಂಥವರಿಗೊಂದು ದಿಕ್ಕಾರ ಹಾಕಿದ ಟೋನಿ.

ಈಗಲೂ ಟೋನಿಯ  ಕಣ್ಣುಗಳು ಆ ವ್ಯಕ್ತಿಗಾಗಿ ಹುಡುಕುತ್ತವೆ. ಎಲ್ಲರಲ್ಲೂ ಆ ವ್ಯಕ್ತಿಯನ್ನು ಹುಡುಕುತ್ತಾನೆ ಟೋನಿ.   ಎಲ್ಲೋ ನಮ್ಮ ಭಾರತೀಯರು ಹಾಗು ಯಾರೂ ಸೇಫ್ ಆಗಿಲ್ಲವೇನೋ ಎಂಬ ಅವ್ಯಕ್ತ ಭಯ ಟೋನಿಯಲ್ಲಿ ಮನೆ ಮಾಡಿದೆ! ಟೇಕ್ ಕೇರ್ ಆಫ್ ಯುವರ್ಸೆಲ್ಫ್.

Saturday, April 27, 2013

Verity 14 : Vote???

ಮತ  ಹಿತ - ಪ್ರಜೆಗಳೇ ಮತದಾನದಂದು ತಪ್ಪದೇ ಮತ ಹಾಕಿ.
ಮತ ಪ್ರಜಾಪ್ರಭುತ್ವಕ್ಕೆ ಅದುವೇ ಹಿತ..
- ಪೇಪರಿನಲ್ಲಿ ಇದನ್ನು ಓದಿದಾಗ, ನಿಟ್ಟುಸಿರು ಬಿಟ್ಟ ಟೋನಿ.

ಬುದ್ದಿ ಬಂದಮೇಲೆ ನೆನಪಲ್ಲಿರೋ ಮೊದಲ ಪ್ರಧಾನಿ PVN. ಅದೂ ಪ್ರೈಮರಿ ಶಾಲೆಯಲ್ಲಿ ಬಾಯಿ ಪಾಠ  ಮಾಡಿ ಮೆದುಳಿನ ಯಾವುದೋ ಮೂಲೆಯಲ್ಲಿ ಶೇಕರಣೆಗೊಂಡ ಹೆಸರು.  ಬಾಲ್ಯವನ್ನು ನೆನಪಿಸಿಕೊಂಡ ಟೋನಿ.

ಅಚಾನಕ್ಕಾಗಿ ಯಾವುದೋ ಮಿನಿಸ್ಟರ್ ತೀರಿಕೊಂಡ ಸುದ್ದಿಯನ್ನು ಅಜ್ಜನ ರೇಡಿಯೋದಲ್ಲಿ ಕೇಳಿ, ಎಷ್ಟು ದಿನ ರಜೆ ಸಿಗುತ್ತದೆಯೋ ಎಂಬ ಯೋಚನೆಯಲ್ಲಿ ಮುಳುಗಿ, ಅದೇ ಗುಂಗಿನಲ್ಲಿ ನಾಳೆ ಶಾಲೆಗೆ ಹೋಗಿ, ಗೆಳೆಯರ ಕಣ್ಣಲ್ಲಿ ಅರಳಿದ ಕುಶಿಯನ್ನು ನೋಡಿ, ಮೇಸ್ಟ್ರು ಹೇಳಿದಾಗ ೧ ನಿಮಿಷ ಕಣ್ಣು ಮುಚ್ಚಿ, ಹಾಗೇ ಕಣ್ಣು ಮುಚ್ಚಿದಾಗ ಇನ್ನೇನು ಹೋಂವರ್ಕ್ ಕೊಡುತ್ತಾರೋ  ಎನ್ನುವ sub-ಯೋಚನೆಯಲ್ಲಿ ಮುಳುಗಿ, ಕಣ್ಣು ಬಿಟ್ಟು ನಂತರ ಮನೆ ಕಡೆ ಓಡುವಾಗ, ನಮ್ಮ ಮುಗ್ಧತೆಯನ್ನು ನೋಡಿ, ಸತ್ತವರ ಪ್ರಾಣಕ್ಕೂ ಒಂದು ಕ್ಷಣ, ಮುಕ್ತಿ ಹಾಳಾಗಲಿ, ಮತ್ತೆ ಮಕ್ಕಳಾಗಿ ಹುಟ್ಟಬೇಕೆನ್ನುವ ಆಸೆ ಮೂಡುತಿತ್ತೇನೋ!

ಟೋನಿಗೆ ಈಗ ಸುಮಾರು 30 ವರ್ಷ. ಬಿಸಿ ರಕ್ತ ತಣ್ಣಗಾಗಲು ಶುರುವಾಗುವ ಸಮಯ. ಟೋನಿಗೆ ತನ್ನದೇ ಆದ ವ್ಯವಹಾರಗಳಿವೆ. ಸಂಸಾರದ ಜವಾಬ್ದಾರಿಯೂ ಹೆಗಲ ಮೇಲಿದೆ. ಇದೆಲ್ಲದರ ನಡುವೆ, ಇತರೆ ವಿಷಯದ ಬಗ್ಗೆ ತಲೆ ಕೆಡಿಸಿಕೊಲ್ಲೋರು ಯಾರು? 'ವೋಟು ಹಾಕೋಕೆ ಊರಿಗೆ ಬರ್ತೀಯ?' ಎಂದು ತಂದೆ ಕೇಳಿದಾಗ, 'ಇಲ್ಲ' ಎಂಬ ಉತ್ತರ ಹೃದಯದಾಳದಿಂದ ಬಂತು.

ವೋಟು ಹಾಕುವ ದಿನ ಮತದಾರರ ಕೈ ಬೆರಳಿಗೆ ಮಸಿ ಬಳಿಯುವ ಸರ್ಕಾರ, ನಂತರ ತನ್ನ ಪೂರ್ತಿ ದೇಹಕ್ಕೆ ಮಸಿ ಬಳಿದುಕೊಳ್ಳುವುದು ಒಂದು ವಿಪರ್ಯಾಸ. ಈಗ ಕಾಲ ಬದಲಾಗಿದೆ. ಓದಿರದವರೂ ಕೂಡ ಟಿವಿ ನೋಡುತ್ತಾರೆ.
ರಾಜಕಾರಣಿಗಳು ಬಣ್ಣವಿಲ್ಲದ ಗೋಸುಂಬೆಗಳಂತೆ ಎಂದು ಅರಿವಾಗುತ್ತಾ ಇದೆ. ಆದ್ರೆ 4 ಜನ ಕಳ್ಳರಲ್ಲಿ ಒಬ್ಬ ಉತ್ತಮ ಕಳ್ಳನಿಗೆ ಮತ ಹಾಕೋ ಪರಿಸ್ಥಿತಿ ಈ ಪ್ರಜೆಗಳಿಗೆ !!

ಮೀಸಲಾತಿ, ಒಳ ಮೀಸಲಾತಿ, ಕೋಮುವಾದ-ವೋಟುಬ್ಯಾಂಕ್ ಎಂದು 50 ವರ್ಷ ಆಳಿದ ಕೆಟ್ಟ ಕೇಂದ್ರ ಸರ್ಕಾರಕ್ಕೆ, 'ಏನು ಮಾಡಿದ್ದೀರಿ? ಈ 50 ವರ್ಷಗಳಲ್ಲಿ?' ಎಂದು ಕೇಳಿದಾಗ - '50  ವರ್ಷದ ಹಿಂದೆ ದೇಶದ ಪರಿಸ್ಥಿತಿ ಹೇಗಿತ್ತು ಎಂದು ನಿನ್ನ ಅಪ್ಪನನ್ನೋ, ಅಜ್ಜನನ್ನೋ ಕೇಳು' ಎನ್ನುವ ತಿರಸ್ಕಾರದ ಕೇಕೆ !!
5 ವರ್ಷ ಬಾಳಿದ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಎಷ್ಟು ತಿಂದರೂ ಇನ್ನೂ ನೀಗದ ಹಸಿವು!!
ಎಲ್ಲರೂ ಒಂದೇ. - ಯಾರೋ ಹೇಳಿದಂತೆ ಇವರ zanda ಬೇರೆ agenda ಒಂದೇ!

ತಿನ್ನಿ, ತಿಂದು ಸಾಯಿರಿ. 'ಅಂತೂ ಸತ್ತನಲ್ಲ' ಎಂದು ಜನ ನಿಟ್ಟುಸಿರು ಬಿಡುವ ಕಾಲ ಬಂದಾಗಿದೆ!

Monday, September 17, 2012

Verity 13 - Idiot

This is in reply to UR Ananthmurthy, so called dignified intellectual.

To, U R Ananthamurty.

With reference to your taking on Modi, as described in Kannadaprabha 15/09/2012.
(It read : Shame If Cruel Modi becomes the PM – URA.
You have also asked people to treat him like ‘Asparsha’,and build hatred against him.
And also you have mentioned that if you see his picture, you burn with anger.)


I’ve something to say about you. This is not only my opinion, but also hundreds of us.


People, call achievers, with respect as ‘Srimaan’ or ‘Sanmaanya’.
Similarly, I would like to use ‘Ayogya’ word for you.
Because, neither you deserve respect, nor you are an achiever.
After all, what you have done to the society?

Yes, only thing I appreciate is those campaign against ‘Mantri Mall in Malleshwaram’.
That too, I suspect your credibility. Probably you have gone there to enjoy an evening,
and something – like nobody gave you an attention, made you to take that call.

Boss, you call someone as cruel, you have to justify. Do You have any evidence?
Nowhere it is proved that Modi led or supported those massacres.
Infact he is against violence. I say he is innocent, because Muslims live there with the same facilities and respect, the others have in Gujarat.

They put their time in improving themselves, not like you people who sit idle and talk to impress corrupt congress. In fact that is how you got your Jnanapeeta, by pleasing the corrupt govt.

Okay, I agree what had happened in Gujarat was bad in which 790 Muslims and 254 Hindus were ultimately killed and 223 more people were reported missing(refer Wikipedia).
I strongly doubt your credibility, as your fight is only against Modi and Hindus and not against violence.
You never said a single word about 9/11? At that time probably you were missing from your wit.
1984 – Sikh massacre had done more damage than Gujarat. The Government of India reported 2,700 deaths in the ensuing chaos. In the aftermath of the pogrom, the Government of India reported 20,000 had fled the city, however the PUCL reported “at least” 50,000 displaced person.

Rajiv, who was sworn in as the Prime Minister after his mother’s death, when asked about the riots said “when a big tree falls, the earth shakes”.

And what is your take on this? You are now a great supporter of Congress, led by his wife!

So, definitely your battle is not against Violence. It is against Hindus.

You have gone mad. Do you know?, you have supported ‘Gohatya’ – killing of innocent cattle?
Now tell me who is cruel?

You spread hatred. And so I am. Even when I see your dirty face in a photo, I would like to spit on it. (But, I'll not do that as my culture does not allow me to do that. Also, mine is fight against an issue and not against a person.)

Realise you are turning 80. It is the high time to live life peacefully and not to spread hatred without reason. Because of guys like you, terrorists get moral support, like the ones arrested recently in bangalore, planning to kill Modi supporters. Wake up!!!

If you want to really fight, then fight against Corruption and Violence, not against one community alone.
Realise, you need to interrogate yourself!!! Otherwise more people begin to realise and see the ‘Ayogya’ in you.

-- AD.

Time is always right to do what is right.
But prior to that you should be able to differentiate between right and wrong!

Monday, April 23, 2012

Verity 12 - ನಿರ್ದಯಿಗಳು....

'ಯಾರಪ್ಪ ಈ ಹುಡುಗಿ?' ಕಂಬಿಯಿಂದ ಇಣುಕುತ್ತಾ ತಮ್ಮನ ಹತ್ತಿರ ಕೇಳಿದ ಅಣ್ಣ.
ಬ್ಲೂ jeans, ವೈಟ್ ಟೀ ಶರ್ಟ್ ದರಿಸಿದ ಹುಡಗಿಯನ್ನ ನೋಡಿದ ತಮ್ಮ.

ಮೇಲಿನಿಂದ ಏನೋ ಬಿದ್ದ ಹಾಗೆ ಆಯಿತು, 'ಥೂ! ಮತ್ತೆ ಮೇಲಿನಿಂದ ಹಕ್ಕಿ ಹಿಕ್ಕೆ ಹಾಕಿದೆ!'.
ಅಣ್ಣ ಹೇಳಿದಾಗ, ತಮ್ಮ ಅದನ್ನು ಗಮನಿಸದೆ ಹುಡುಗಿಯತ್ತಲೇ ನೋಡುತಿದ್ದ.

ಬೆಂಗಳೂರ್. ಶನಿವಾರ, ಬೆಳಗ್ಗೆ 8 ಗಂಟೆ.
ಈ ಹುಡುಗಿಗಿಂತ ಸುಮಾರು 15 ನಿಮಿಷಗಳ ಮೊದಲು ಇಲ್ಲಿಗೆ ಬಂದೆವು.
ಇದಕ್ಕಿಂತಲೂ ಮೊದಲು, ಹಾಸ್ಟೆಲ್ ನಲ್ಲಿ ಎಷ್ಟು ಹಾಯಾಗಿ ಇದ್ದೆವು!
ಫ್ರೆಂಡ್ಸ್ ಗಳ ಜೊತೆಗೂಡಿ... ಆಹಾ, ಅದರ ಗಮ್ಮತ್ತೇ ಬೇರೆ!.

ನೆನ್ನೆ ರಾತ್ರಿ ಊಟ ಮಾಡಿ ಮಲಗುವ ವರೆಗೂ, ಯಾವುದೇ ಚಿಂತೆ ಇರಲಿಲ್ಲ.
ಹಾಳಾದ್ದು, ಬೆಳಗ್ಗೆ ಯಾವ ಗಳಿಗೆ ಯಲ್ಲಿ ಎದ್ದೆವೋ?
ನನ್ನನ್ನು, ನನ್ನ ಅಣ್ಣನನ್ನು, ನಮ್ಮ ಫ್ರೆಂಡ್ಸ್ ಗಳನ್ನು ಬಲವಂತವಾಗಿ ದೊಡ್ಡ ಆಟೋವೊಂದರ ಹಿಂದೆ ತುಂಬಿದರು.
ಅರ್ದ ಗಂಟೆಯ ನಂತರ, ನಮ್ಮನ್ನೆಲ್ಲ ತಂದು ಇಲ್ಲಿಟ್ಟರು.

ತಮ್ಮನ ಯೋಚನೆ, ಆ ಹುಡುಗಿಯ ಸುಂದರ ಕಣ್ಣೊಳಗಿನ ಮುಗ್ದತೆಯ ಆಳದಸ್ಟೆ ಅಳಕ್ಕೆ ಹೋಗಿತ್ತು.

ದಡಕ್ಕನೆ ತೆರೆದ ಬಾಗಿಲಿನ ಸದ್ದಿನಿಂದ ವಾಸ್ತವಕ್ಕೆ ಬಂದ ತಮ್ಮ.
ಅಣ್ಣ, ಇನ್ನೂ ತಲೆಯ ಮೇಲೆ ಬಿದ್ದ ಹಿಕ್ಕೆಯಿಂದ ಡಿಸ್ಟರ್ಬ್ ಆದವನು ಚೇತರಿಸಿಕೊಂಡಿರಲಿಲ್ಲ.

ಹಟಾತ್ತಾಗಿ ಬಂದ ಕೈಯೊಂದು, ತಮ್ಮನ ಕತ್ತನ್ನು ಹಿಡಿದು ಹೊರಗೆಳೆಯಿತು.
ಇದನ್ನು ಅಣ್ಣ ದಂಗಾಗಿ ನೋಡುತಿದ್ದ!

ಆ ಕೈಯ ತಲೆಗೆ ಏನೆನಿಸಿತೋ, ತಮ್ಮನನ್ನು ಮತ್ತೆ ಒಳಗೆ ನೂಕಿ,
ಅಣ್ಣನ ಕತ್ತು ಹಿಡಿದು ಹೊರಗೆಳೆದು ಆ ಹುಡುಗಿಗೆ ತೋರಿಸಿತು.
ಹುಡುಗಿಯ ಕಣ್ಣಲ್ಲಿನ ತೃಪ್ತಿಯನ್ನು ತಮ್ಮ, ಆದ ಆಘಾತದಿಂದ ಸಾವರಿಸಿಕೊಳ್ಳುತ್ತ ಗಮನಿಸಿದ.
ಕಿರಿಚಿಕೊಳ್ಳುತ್ತಿದ್ದ ಅಣ್ಣನನ್ನು ಅದೇ ಕೈ, ಇನ್ನೊಂದು ರೂಮಿಗೆ ತೆಗೆದುಕೊಂಡು ಹೋಯಿತು.

ಸ್ವಲ್ಪ ಹೊತ್ತಿನ ನಂತರ ಅಣ್ಣ ಕಿರಿಚುವುದನ್ನು ನಿಲ್ಲಿಸಿದ.

ಅಬ್ಬ, ಅಣ್ಣನನ್ನು ಬಿಟ್ಟು ಬಿಟ್ಟರು ಎಂದುಕೊಂಡ ತಮ್ಮನಿಗೆ, ಸ್ವಲ್ಪ ನಂತರ ಅಲ್ಲಿಂದ ಮರೆಯಾದ ಹುಡುಗಿಯ ಕೈಯಲ್ಲಿನ
ಪಾರ್ಸೆಲ್ ನಲ್ಲಿ, ಅಣ್ಣ ಹತನಾಗಿ ಶವವಾಗಿ ಮಲಗಿದ್ದು ಗೊತ್ತೇ ಆಗಲಿಲ್ಲ!!

Friday, November 12, 2010

Verity 11 - Avid

‘Nothing is permanent’ ಯಾರೋ ಹೇಳಿದ್ದು ನೆನಪಾಯಿತು. ಕೊನೆಯ ಬಾರಿಗೆ ಎಲ್ಲಿ ಕೇಳಿದ್ದು?, ಮನಸ್ಸೆಂಬ folder ನಲ್ಲಿ search ಮಾಡಿದೆ.
ಉಹು, ಸಿಕ್ತಾ ಇಲ್ಲ, ಎನ್ನುವಸ್ಟರಲ್ಲಿ ಒಂದು situation ಸಿಕ್ಕೆ ಬಿಟ್ಟಿತು. Long ago, ನಾಟ್ so long ago, ನಾನು ಮನೆ ಬಿಟ್ಟು ಹೊರಡುತ್ತಲೇ ಇರಲಿಲ್ಲ.ಸ್ಕೂಲ್ ಗೆ ರಜೆ ಸಿಕ್ಕಾಗ ಅಜ್ಜನ ಮನೆಗೆ ಮಾತ್ರ ಹೋಗುತ್ತಿದೆನೆ ವಿನಃ, ಬೇರೆ ಎಲ್ಲೂ ಹೋಗಿಯೇ ಗೊತ್ತಿರಲಿಲ್ಲ.
ನೆಂಟರ ಮನೆಗಂತೂ ಅನಿವಾರ್ಯ ಪ್ರಸಂಗಗಳಲ್ಲಿ ಮಾತ್ರ ಹೋಗುತ್ತಿದ್ದೆ.

ಕಾಲ ಬದಲಾಯಿತು. Post graduation ಮುಗಿಸಿ ಕೆಲಸಕ್ಕೆ ಸೇರಿದೆ ನೋಡಿ. ಆಡು ಮುಟ್ಟದ ಸೊಪ್ಪಿಲ್ಲ, ನಾನು ಹತ್ತದ ಬಸ್ಸಿಲ್ಲ!. ತಿರುಗಾಟ. ಮೈಸೂರ್-ಬೆಂಗಳೂರು-ಮಂಗಳೂರು-ಸಾಗರ್-ಶಿಮೋಗ. ಒಂದು ಸಮೀಕ್ಷೆಯ ಪ್ರಕಾರ 2010 ಜನವರಿ 21 ರಿಂದ 31 ರವರೆಗೆ ನಾನು ಸುಮಾರು 2000 km ದೂರ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದೆ!. ಇದನ್ನೆಲ್ಲಾ ನೋಡಿ ನನ್ನ ಮಾವ ನಗುತ್ತ ಹೇಳಿದ್ದರು ‘Nothing is permanent, ಮೊದಲೆಲ್ಲ ಮನೆ ಬಿಟ್ಟು ಹೊರಡುತ್ತಿರಲಿಲ್ಲ, ಈಗ ನೋಡು ಕರ್ನಾಟಕ ಪರ್ಯಟನೆ ಮಾಡುತ್ತಿದ್ದೀಯ’!.

ದಿಟ. Nothing is permanent. Changes are inevitable. ಕಾಲ ಬದಲಾಗುತ್ತಿದ್ದಂತೆ, ಮಾನವ ಮತ್ತಷ್ಟು creative ಆಗುತಿದ್ದಾನೆ. ಆದರೆ ಏಕೋ ಯಾವುದು right, ಯಾವುದು wrong ಎಂದು ಗುರುತಿಸುವಾಗ ಎಡವುತಿದ್ದಾನೆ. ಒಂದು example ಹೇಳ್ತಿನಿ. KitKat chacolate ತಗೊಂಡೆ. ತಿಂದೆ. Wrapper ತಿನ್ನೋಕೆ ಆಗೋಲ್ಲ ನೋಡಿ! ಎಸಿಯೋದೊಂದು ಬಾಕಿ. Public ಪ್ಲೇಸ್. ಎಸೆದರೆ ರೋಡ್ ಮೇಲೆ ಕಸವಾಗುತ್ತೆ. Dust binಗಾಗಿ ಸುತ್ತಲೂ ನೋಡಿದೆ. ಉಹು, ಇಲ್ಲ. Govt ನ ಒಂದು ಸರಿ blame ಮಾಡಿ ಅಲ್ಲೇ ಬಿಸಾಕಿಬಿಡಲೇ? ಯಾರು ನೋಡುತ್ತಿಲ್ಲ. ಅಲ್ಲ, ನೋಡಿದರೆ ನನಗೇನು?

ಬ್ಹಹುಶ ಮೊದಲಾಗಿದ್ದರೆ, ನಾನು ಇಸ್ಟೆಲ್ಲಾ ಯೋಚನೇನೆ ಮಾಡುತ್ತಿರಲಿಲ್ಲ. ನೀಟಾಗಿ ಬೀಸಾಕಿ ನನ್ನ ಪಾಡಿಗೆ ನಾನು ಹೋಗುತಿದ್ದೆ. But not now. ಒಮ್ಮೆ ಯೋಚಿಸಿ, Light ಗಿಂತ speed ಆಗಿ decide ಮಾಡಿಬಿಡಬಹುದು, ನಾವು ಮಾಡುತ್ತಿರುವುದು ಸರಿಯೋ - ತಪ್ಪೋ?

ತಪ್ಪು . Dust bin ತಕ್ಷಣ ಸಿಗದಿದ್ದರೆ , ಪಾಕೆಟ್ ನಲ್ಲಿ ಇಟ್ಟುಕೊಂಡು ಸಿಕ್ಕಾಗ ಹಾಕಿ.ನಾನೂ ಕೂಡ ಹಾಗೆಯೇ ಮಾಡುತ್ತೇನೆ. Thanks to one of my friend, who firmly believes in doing this sort of right things.


Creativity ಗೆ ಇಲ್ಲಿ ಬರಗಾಲವೇ?. ಎಲ್ಲರೂ ಒಂದಲ್ಲ ಒಂದು ಥರ ಕ್ರಿಯೇಟಿವ್ ಆಗಿ ಇರ್ತಾರೆ. ಇನ್ನೊಂದು example ನಿಮಗೆ ಹೇಳಲೇ ಬೇಕು. ಬಟ್, ಇಲ್ಲಿರೋದು negative creativity. ಇದು competitive ವರ್ಲ್ಡ್. ಡಾರ್ವಿನ್ ನ ‘survival ಆಫ್ ದಿ fittest’ ಎನ್ನುವುದು ಎಂದಿಗೂ ನಿಜ, ಆಲ್ ಟೈಮ್ truth.

ಕೆಲಸಕ್ಕೆ ಸೇರಿದ ಹೊಸತರಲ್ಲಿ ನಾನು ಪ್ರೈವೇಟ್ ಬಸ್ನಲ್ಲಿ ಓಡಾಡುತಿದ್ದೆ. Govt ಬಸ್ ಗಿಂತಲೂ 15-20% ಕಡಿಮೆ ವೆಚ್ಚದಲ್ಲಿ. ಟಿಕೆಟ್ ಬುಕಿಂಗ್ ಕೂಡ easy, ಒಂದು ಫೋನ್ ಕಾಲ್ ಸಾಕಾಗಿತ್ತು. ಒಮ್ಮೆ, ಹೀಗೆಯೇ ಅಡ್ವಾನ್ಸ್ ಬುಕ್ ಮಾಡಿದ್ದೆ. ಬಟ್, ಅವತ್ತು ಬಸ್ ಬಂದಾಗ ಆ ಸೀಟ್ ಬೇರೆಯವರಿಗೆ ಬುಕ್ ಮಾಡಿದ್ದು ತಿಳಿಯಿತು. ಇದೆ ತರ situation ನನ್ನ ಇಬ್ಬರು ಫ್ರೆಂಡ್ಸ್ ಗಳಿಗೂ ಆಗಿತ್ತು. ಆಮೇಲೆ, ಟೈಮ್ ಸೆನ್ಸ್ ಇಲ್ಲ. ಮಾರ್ಗ ಮಧ್ಯದಲ್ಲಿ ಲಗೇಜು ಇಳಿಸುತ್ತಾ ಗಂಟೆಗಟ್ಲೆ ಟೈಮ್ ವೇಸ್ಟ್ ಮಾಡುವುದು. ಹೀಗೆ ಪ್ರಯಾಣ ಪ್ರಯಾಸವಾಗತೊಡಗಿತು.

Obviously, alternate/better option ಆದ ksrtc ಬಸ್ಗಳಲ್ಲಿ ಹೋಗತೊಡಗಿದೆ. ಹೀಗೆ ನನ್ನ ತರಹ ಎಲ್ಲರೂ Ksrtc ಗೆ ಮೊದಲ priority ಕೊಡಲು ಆರಂಬಿಸಿದರು. ಮೈಸೂರ್ – ಶಿಮೋಗ, ಆಲ್ಮೋಸ್ಟ್ ಎಲ್ಲರೂ ಯೆಲ್ಲಾಪುರ ಬಸ್, ಅಥವಾ ಬೇರೆ ರಾಜಹಂಸ ಬಸ್ಗಳನ್ನೇ ಹತ್ತುತಿದ್ದರು, ಪ್ರೈವೇಟ್ ಬಸ್ ಗಳಿಗೆ ಕ್ಯಾರೆ ಅನ್ನುತ್ತಿರಲಿಲ್ಲ.

ಪ್ರೈವೇಟ್ ಬಸ್ಗಳಿಗೆ survival ಪ್ರಶ್ನೆ. ಹೆಚ್ಚುತ್ತಿರುವ ksrtc popularity ಯನ್ನು ಕಡಿಮೆ ಮಾಡಬೇಕು. ಬಟ್ ಹೇಗೆ? “ಎಲ್ಲ ಪ್ರಶ್ನೆಗೂ ಉತ್ತರ ಇರಲೇ ಬೇಕು. ಉತ್ತರ ಇಲ್ಲದಿದ್ದರೆ ಅದು ಪ್ರಶ್ನೆಯೇ ಅಲ್ಲ.”

Bedbugs. ತಿಗಣೆ. ಮ್ಯಾಚ್ ಬಾಕ್ಸ್ ನಲ್ಲಿ ತಿಗನೆಗಳನ್ನು ತುಂಬಿಸಿ, ಸೀಟ್ ಹುಡುಕುವ ನೆವದಲ್ಲಿ ಅದನ್ನು ksrtc ಬಸ್ ಒಳಗೆ ಬಿಡುವುದು. ಇದು ಆಲ್ಮೋಸ್ಟ್ success ಆಗಿತ್ತು. ಪೇಪರ್ನಲ್ಲೂ ಈ bedbugs ಗಳು ksrtc ಬಸ್ಸಿನಲ್ಲಿ ಇರೋದನ್ನ ಪ್ರಚಾರ ಮಾಡಿಸಲಾಯಿತು. Ksrtc ಬಸ್ನವರು ಅದಕ್ಕೆ chemicals ಏನೋ ಹಾಕಲು ಆರಂಬಿಸಿದರು. ಬಟ್, ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಿತು.

ಮೊನ್ನೆ ಇಬ್ಬರು ಹುಡುಗರು, redhand ಆಗಿ ಸಿಕ್ಕಿಹಾಕಿಕೊಂಡಾಗ ಸಮಸ್ಯೆಯ ಮೂಲ ಬೆಳಕಿಗೆ ಬಂತು. ಅದೇನೇ ಇರಲಿ ಒಂದು ಮಾತ್ರ ನಿಜ. "Trust no one in this greedy world".