Wednesday, August 7, 2013

Verity 16 - Soft Robbery, open letter to RBI

Subject - Banks, recruitment and Robbery....

To, RBI.

Probationary officer jobs in XYZ Bank.
150 seats!(General seats 49)
More than 4 to 5 lac people apply for that 49 seats all over India.
Application fee 250 to 400.

Just a rough calculation, if my arithmetic is not wrong, it turns to be 250*4,00,000= 10,00,00,000/- (Yes, 10 crores!)
Is this not a corrupt money? Moreover, this money belongs to jobless people.

One may argue, if fees are less, then that 4 to 5 lac people count will increase to more than 20 lac.
Well, time to introspect. Government has to improve job opportunities.

Banks should return some amount of the fee to the applicants if they cross certain cut-off marks.
Verity is, for common people - Time means struggle, strive till death!

In this greedy world, on behalf of all those who have lost money like this,
- A common man.

Sunday, July 14, 2013

Verity 15 - ಅವ್ಯಕ್ತ

July 10, A wednesday. 6pm. ಟೋನಿ ಎಂದಿನಂತೆ ಕೆಲಸ ಮುಗ್ಸಿ ಮನೆಗೆ ಹೊರಟ. ಟೋನಿ ಯಾವಾಗಲೂ ಪಬ್ಲಿಕ್ ಬಸ್ನಲ್ಲೇ ಟ್ರಾವೆಲ್ ಮಾಡ್ತಾನೆ, ಸಿಂಪಲ್ ರೀಸನ್ - ಟೋನಿಯ ಬಳಿ ಪ್ರೈವೇಟ್ ವೆಹಿಕಲ್ ಇಲ್ಲ!  As a routine, ಮಳೆ ಕೂಡ ಅಲ್ಲಲ್ಲಿ  ಬಿದ್ದು ಭೂಮಿಯಲ್ಲಿ ಇಂಗಿ ಹೋಗಿತ್ತು.

೪ ಕಿ ಮೀ ಹೋಗಲು ಅರ್ದ ಗಂಟೆ ತಗೊಂಡ ಬಸ್ಸಿನಿಂದ ಟೋನಿ ಇಳಿದಾಗ ಮತ್ತೆ ಮಳೆಗೆ ಕೆಳಬೀಳುವ ಮೂಡು ಇತ್ತು.  ಮತ್ತೊಂದು ಬಸ್ ಹತ್ತಿದರೆ ಹತ್ತು ನಿಮಿಷದಲ್ಲಿ ಮನೆ ತಲುಪಬಹುದು. ಟೋನಿ ಆ ಬಸ್ಸಿಗಾಗಿ ಕಾಯತೊಡಗಿದ. 

ಕೆಲವೊಮ್ಮೆ ಮನಸ್ಸಿನಲ್ಲಿ ಎಸ್ಟೊಂದು ವಿಷಯಗಳು ತುಂಬಿ ಟ್ರಾಫಿಕ್ ಜಾಮ್ ಆಗಿಬಿಡುತ್ತೆ!  ಆಲೋಚನೆಗಳು ಮಳೆಯಂತೆ ಬಂದು, ಹೃದಯದಲ್ಲಿ ಇಂಗಿ ಹೋಗುತ್ತೆ! ನೆನಪಿನಲ್ಲಿ ಅರಳಿ ಮರೆಯಾಗಿಹೋಗುತ್ತೆ!  ಕಣ್ಣೆಂಬ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳು ಎಸ್ಟೋ, ಅದರಲ್ಲಿ ಕೆಲವು ಕಳೆದು ಹೋಗಿವೆ, ಇರುವುದರಲ್ಲಿ ನೆನಪಾಗುವುದು ಕೆಲವೇ ಕೆಲವು.

ಟೋನಿ ಬಸ್ ಹತ್ತಿದ. ಪ್ರೈವೇಟ್ ಮಿನಿ ಬಸ್. ಸೀಟಿನಲ್ಲಿ ಕುಳಿತಾಗ houseful ಆದ ಬಸ್ ಮುಂದೆ ಚಲಿಸಿತು. ಟೋನಿ ಅಚಾನಕ್ಕಾಗಿ ಪಕ್ಕದಲ್ಲಿ ಕುಳಿತವನ ಮೊಬೈಲ್ ಫೋನ್ ನೋಡಿದ. ಓಲ್ಡ್ ನೋಕಿಯಾ ಮೊಬೈಲ್. ಆದರೆ ಅವನ ಗಮನ ಸೆಳೆದದ್ದು ಮೊಬೈಲ್ ಅಲ್ಲ. ಮೊಬೈಲ್ ಮೇಲಿನ ಸ್ಕ್ರೀನ್. ಸ್ಕ್ರೀನ್ ಮೇಲಿನ ಬರಹ. ಟೋನಿಯ ಮನಸ್ಸು ಜಾಗೃತಗೊಂಡಿತು. ಮತ್ತೊಮ್ಮೆ ಸಾಮನ್ಯವಾಗಿರುವಂತೆ ಆಕಡೆ ಈಕಡೆ ನೋಡುತ್ತಾ ಆತನ ಮೊಬೈಲ್ ನೋಡಿದ ಟೋನಿ. ಹೌದು. ತಾನು ನೋಡಿದ್ದು ನಿಜ. 

ಆತ ಸಾಮಾನ್ಯ ಡ್ರೆಸ್ ಹಾಕಿದ್ದ. ಟೋನಿಯ ಅಸ್ಟೇ ಹೈಟು. ಸ್ವಲ್ಪ ಅಗಲ. ಪ್ಯಾಂಟ್ ತೊಡೆಯ ಬಳಿ ಸ್ವಲ್ಪ ಹರಿದುಹೋಗಿತ್ತು.
ತನ್ನಷ್ಟಕ್ಕೆ ತಾನು ತನ್ನ ಮೊಬೈಲ್ ನೋಡುತ್ತಾ, ಹೊರಗೆ ಇಣುಕುತ್ತ ಇದ್ದ. ಟೋನಿ ಯೋಚಿಸಲಾರಂಬಿಸಿದ. ಸಮಯ ತುಂಬಾ ಕಡಿಮೆ ಇದೆ. ಇನ್ನು ಎರಡೇ ಸ್ಟಾಪ್. ಆತ ಯಾವುದೇ ಅಪ್ಲಿಕೇಶನ್ ಓಪನ್ ಮಾಡುತ್ತಾ ಇರಲಿಲ್ಲ. ಸುಮ್ಮನೆ ತನ್ನ ಮೊಬೈಲ್ ನೋಡ್ತಾ ಇದ್ದ, ಯಾರ ಹಂಗೂ ಇಲ್ಲದೆ. ಯಾವುದಾದರೂ ಪೊಲೀಸರಿಗೆ ತಿಳಿಸಲ? ತಿಳಿಸಿದರೂ ಅವರೇನು ಮಾಡಿಯಾರು? ಇಸ್ಟರಲ್ಲೇ ಅವರಿಗೆ ತಿಳಿದಿರಲೇ ಬೇಕು!

ನೆಕ್ಸ್ಟ್ ಸ್ಟಾಪ್ ಬಂದೇ ಬಿಟ್ಟಿತು! ಆತ  ಎಲ್ಲಿ ಇಳಿಯುತ್ತಾನೋ? ಮುಂದೆ ಏನು ಮಾಡುತ್ತಾನೋ?

ಟೋನಿ ಒಬ್ಬ ಕಾಮನ್ ಮ್ಯಾನ್. ಅವನು ತಲೆಯಲ್ಲಿ ಹುಳ ಬಿಟ್ಟುಕೊಂಡಿರೋದಕ್ಕೆ  ಕಾರಣ ಪಕ್ಕದವನ ಮೊಬೈಲ್. ಅದರ ಮೇಲೆ ಬರೆದದ್ದು. ನಮ್ಮ ಸುತ್ತಮುತ್ತಲೂ ಇರುವವರಿಂದ ನಾವು ಹೇಗೆ ಇನ್ಫ್ಲುಯೆನ್ಸ್ ಆಗುತ್ತೇವೆ ಎನ್ನೋದಕ್ಕೆ ಇದು ಕನ್ನಡಿ. ತಾನಾಯ್ತು, ತನ್ನ ಸಂಸಾರವಾಯ್ತು ಎನ್ನುವವರು ಸಮಾಜದ ಒಳ್ಳೆಯ ಪ್ರಜೆಗಳಾಗಲಾರರು.

ಟೋನಿಯ ಸ್ಟಾಪ್ ಬಂದೇ ಬಿಟ್ಟಿತು. ಭಾರವಾದ ಹೃದಯದಿಂದ ಏನೂ ಮಾಡಲಾರದ ವ್ಯಥೆಯಿಂದ ಸೀಟಿನಿಂದ ಎದ್ದ ಟೋನಿ. ಟೋನಿಯ ಹಿಂದೆ ಆ ವ್ಯಕ್ತಿಯೂ ಎದ್ದ. ಗುಡ್. ಈತ ಎಲ್ಲಿ ಹೋಗುತ್ತಾನೋ ಎಂದು ನೋಡಬಹುದು ಎಂದುಕೊಂಡ ಟೋನಿ.  ಬಸ್ ಇಳಿದ ಮೇಲೆ ಆ ವ್ಯಕ್ತಿ ಬಸ್ ಸ್ಟಾಂಡ್ ಎದುರಿನಲ್ಲಿರೋ ಮೊಬೈಲ್ ಶಾಪ್ಗೆ ಹೋಗಿದ್ದನ್ನು, ಅಲ್ಲಿ ರಿಚಾರ್ಜ್ ಸ್ಕೀಮನ್ನು ನೋಡುತ್ತಾ ಇರೋದನ್ನು 5 ನಿಮಿಷಗಳ ಕಾಲ ನೋಡಿದ ಟೋನಿ. 
ಆ ಮೊಬೈಲಿನಲ್ಲಿ ಅಂತಾದ್ದು ಏನಿತ್ತು? ಟೋನಿ ಡಿಸ್ಟರ್ಬ್ ಆಗಿದ್ದು ಮೊಬೈಲ್ ಸ್ಕ್ರೀನ್ ಬ್ಯಾಕ್ಗ್ರೌಂಡ್ ನಲ್ಲಿದ್ದ 'ಪಾಕಿಸ್ತಾನ'  ಎಂಬ ಬರಹದಿಂದ! ಟೋನಿಗೆ ಆತನ ಇಂಟೆಂಟ್ ತಿಳಿಯಬೇಕಿತ್ತು. ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕಾಗಿ ಹಪಹಪಿಸುವ ಇಂಥವರಿಗೊಂದು ದಿಕ್ಕಾರ ಹಾಕಿದ ಟೋನಿ.

ಈಗಲೂ ಟೋನಿಯ  ಕಣ್ಣುಗಳು ಆ ವ್ಯಕ್ತಿಗಾಗಿ ಹುಡುಕುತ್ತವೆ. ಎಲ್ಲರಲ್ಲೂ ಆ ವ್ಯಕ್ತಿಯನ್ನು ಹುಡುಕುತ್ತಾನೆ ಟೋನಿ.   ಎಲ್ಲೋ ನಮ್ಮ ಭಾರತೀಯರು ಹಾಗು ಯಾರೂ ಸೇಫ್ ಆಗಿಲ್ಲವೇನೋ ಎಂಬ ಅವ್ಯಕ್ತ ಭಯ ಟೋನಿಯಲ್ಲಿ ಮನೆ ಮಾಡಿದೆ! ಟೇಕ್ ಕೇರ್ ಆಫ್ ಯುವರ್ಸೆಲ್ಫ್.

Saturday, April 27, 2013

Verity 14 : Vote???

ಮತ  ಹಿತ - ಪ್ರಜೆಗಳೇ ಮತದಾನದಂದು ತಪ್ಪದೇ ಮತ ಹಾಕಿ.
ಮತ ಪ್ರಜಾಪ್ರಭುತ್ವಕ್ಕೆ ಅದುವೇ ಹಿತ..
- ಪೇಪರಿನಲ್ಲಿ ಇದನ್ನು ಓದಿದಾಗ, ನಿಟ್ಟುಸಿರು ಬಿಟ್ಟ ಟೋನಿ.

ಬುದ್ದಿ ಬಂದಮೇಲೆ ನೆನಪಲ್ಲಿರೋ ಮೊದಲ ಪ್ರಧಾನಿ PVN. ಅದೂ ಪ್ರೈಮರಿ ಶಾಲೆಯಲ್ಲಿ ಬಾಯಿ ಪಾಠ  ಮಾಡಿ ಮೆದುಳಿನ ಯಾವುದೋ ಮೂಲೆಯಲ್ಲಿ ಶೇಕರಣೆಗೊಂಡ ಹೆಸರು.  ಬಾಲ್ಯವನ್ನು ನೆನಪಿಸಿಕೊಂಡ ಟೋನಿ.

ಅಚಾನಕ್ಕಾಗಿ ಯಾವುದೋ ಮಿನಿಸ್ಟರ್ ತೀರಿಕೊಂಡ ಸುದ್ದಿಯನ್ನು ಅಜ್ಜನ ರೇಡಿಯೋದಲ್ಲಿ ಕೇಳಿ, ಎಷ್ಟು ದಿನ ರಜೆ ಸಿಗುತ್ತದೆಯೋ ಎಂಬ ಯೋಚನೆಯಲ್ಲಿ ಮುಳುಗಿ, ಅದೇ ಗುಂಗಿನಲ್ಲಿ ನಾಳೆ ಶಾಲೆಗೆ ಹೋಗಿ, ಗೆಳೆಯರ ಕಣ್ಣಲ್ಲಿ ಅರಳಿದ ಕುಶಿಯನ್ನು ನೋಡಿ, ಮೇಸ್ಟ್ರು ಹೇಳಿದಾಗ ೧ ನಿಮಿಷ ಕಣ್ಣು ಮುಚ್ಚಿ, ಹಾಗೇ ಕಣ್ಣು ಮುಚ್ಚಿದಾಗ ಇನ್ನೇನು ಹೋಂವರ್ಕ್ ಕೊಡುತ್ತಾರೋ  ಎನ್ನುವ sub-ಯೋಚನೆಯಲ್ಲಿ ಮುಳುಗಿ, ಕಣ್ಣು ಬಿಟ್ಟು ನಂತರ ಮನೆ ಕಡೆ ಓಡುವಾಗ, ನಮ್ಮ ಮುಗ್ಧತೆಯನ್ನು ನೋಡಿ, ಸತ್ತವರ ಪ್ರಾಣಕ್ಕೂ ಒಂದು ಕ್ಷಣ, ಮುಕ್ತಿ ಹಾಳಾಗಲಿ, ಮತ್ತೆ ಮಕ್ಕಳಾಗಿ ಹುಟ್ಟಬೇಕೆನ್ನುವ ಆಸೆ ಮೂಡುತಿತ್ತೇನೋ!

ಟೋನಿಗೆ ಈಗ ಸುಮಾರು 30 ವರ್ಷ. ಬಿಸಿ ರಕ್ತ ತಣ್ಣಗಾಗಲು ಶುರುವಾಗುವ ಸಮಯ. ಟೋನಿಗೆ ತನ್ನದೇ ಆದ ವ್ಯವಹಾರಗಳಿವೆ. ಸಂಸಾರದ ಜವಾಬ್ದಾರಿಯೂ ಹೆಗಲ ಮೇಲಿದೆ. ಇದೆಲ್ಲದರ ನಡುವೆ, ಇತರೆ ವಿಷಯದ ಬಗ್ಗೆ ತಲೆ ಕೆಡಿಸಿಕೊಲ್ಲೋರು ಯಾರು? 'ವೋಟು ಹಾಕೋಕೆ ಊರಿಗೆ ಬರ್ತೀಯ?' ಎಂದು ತಂದೆ ಕೇಳಿದಾಗ, 'ಇಲ್ಲ' ಎಂಬ ಉತ್ತರ ಹೃದಯದಾಳದಿಂದ ಬಂತು.

ವೋಟು ಹಾಕುವ ದಿನ ಮತದಾರರ ಕೈ ಬೆರಳಿಗೆ ಮಸಿ ಬಳಿಯುವ ಸರ್ಕಾರ, ನಂತರ ತನ್ನ ಪೂರ್ತಿ ದೇಹಕ್ಕೆ ಮಸಿ ಬಳಿದುಕೊಳ್ಳುವುದು ಒಂದು ವಿಪರ್ಯಾಸ. ಈಗ ಕಾಲ ಬದಲಾಗಿದೆ. ಓದಿರದವರೂ ಕೂಡ ಟಿವಿ ನೋಡುತ್ತಾರೆ.
ರಾಜಕಾರಣಿಗಳು ಬಣ್ಣವಿಲ್ಲದ ಗೋಸುಂಬೆಗಳಂತೆ ಎಂದು ಅರಿವಾಗುತ್ತಾ ಇದೆ. ಆದ್ರೆ 4 ಜನ ಕಳ್ಳರಲ್ಲಿ ಒಬ್ಬ ಉತ್ತಮ ಕಳ್ಳನಿಗೆ ಮತ ಹಾಕೋ ಪರಿಸ್ಥಿತಿ ಈ ಪ್ರಜೆಗಳಿಗೆ !!

ಮೀಸಲಾತಿ, ಒಳ ಮೀಸಲಾತಿ, ಕೋಮುವಾದ-ವೋಟುಬ್ಯಾಂಕ್ ಎಂದು 50 ವರ್ಷ ಆಳಿದ ಕೆಟ್ಟ ಕೇಂದ್ರ ಸರ್ಕಾರಕ್ಕೆ, 'ಏನು ಮಾಡಿದ್ದೀರಿ? ಈ 50 ವರ್ಷಗಳಲ್ಲಿ?' ಎಂದು ಕೇಳಿದಾಗ - '50  ವರ್ಷದ ಹಿಂದೆ ದೇಶದ ಪರಿಸ್ಥಿತಿ ಹೇಗಿತ್ತು ಎಂದು ನಿನ್ನ ಅಪ್ಪನನ್ನೋ, ಅಜ್ಜನನ್ನೋ ಕೇಳು' ಎನ್ನುವ ತಿರಸ್ಕಾರದ ಕೇಕೆ !!
5 ವರ್ಷ ಬಾಳಿದ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಎಷ್ಟು ತಿಂದರೂ ಇನ್ನೂ ನೀಗದ ಹಸಿವು!!
ಎಲ್ಲರೂ ಒಂದೇ. - ಯಾರೋ ಹೇಳಿದಂತೆ ಇವರ zanda ಬೇರೆ agenda ಒಂದೇ!

ತಿನ್ನಿ, ತಿಂದು ಸಾಯಿರಿ. 'ಅಂತೂ ಸತ್ತನಲ್ಲ' ಎಂದು ಜನ ನಿಟ್ಟುಸಿರು ಬಿಡುವ ಕಾಲ ಬಂದಾಗಿದೆ!