Wednesday, July 14, 2010

Verity 8 : ಅರಿವು - ಮರೆವು

ಎರಡು ಕಣ್ಣಿದ್ದರೂ , ಒಂದು ವಸ್ತು ಎರಡಾಗಿ ಕಾಣಿಸುವುದಿಲ್ಲ!.
ಎಷ್ಟು ಯುನಿಟಿ ಇದೆ ನಮ್ಮ ಕಣ್ಣುಗಳಲ್ಲಿ! ನೇರವಾಗಿ ಒಬ್ಬರನ್ನೊಬ್ಬರು ನೋಡದಿದ್ದರೂ ,
ಎಂತಹ ಸಂಬಂಧ!. ಎಂತಹ co ordination !

ಯಾವುದಾದರೂ ವಸ್ತು ನಮ್ಮ ಕಣ್ಣಿಗೆ ಕಾಣುತ್ತಿದೆ ಎಂದಾದರೆ,
ಒಂದು, ನಾವು ಅದರತ್ತ ನೋಡುತ್ತಿರಬೇಕು; ಎರಡು, ನಮ್ಮ ಕಣ್ಣು ಸರಿ ಇರಬೇಕು,
ಮೂರು, ನಾವು ನೋಡುತ್ತಿರುವ ಅರಿವು ನಮಗಿರಬೇಕು, ಕೊನೆಯದಾಗಿ ಮತ್ತು
ಮುಕ್ಯವಾಗಿ, ಆ ವಸ್ತುವಿನ ಮೇಲೆ ಬೆಳಕು ಇರಬೇಕು.

ಬೆಳಕಿಲ್ಲದೆ ಹೋದರೂ ಕಾಣಿಸುವ ವಸ್ತುವೇನಾದರೂ ಇದೆಯೇ? ಎಂದು ಯೋಚಿಸತೊಡಗಿದೆ.
ಉಹು!. ತಕ್ಷಣ ಏನೂ ಹೊಳೆಯಲಿಲ್ಲ.
ಹಾಗೆ ಯೋಚಿಸುತ್ತ ರೋಡ್ ಕ್ರಾಸ್ ಮಾಡಿದೆ.

'ಎಷ್ಟು 1 kg ಗೆ', ಮಾವಿನ ಹಣ್ಣನ್ನು ನೋಡುತ್ತಾ ಕೇಳಿದೆ.
'50 ರೂಪಾಯಿ ಸಾರ್', ಆತ ನನ್ನನ್ನೇ ನೋಡುತ್ತಾ ಹೇಳಿದ.
'40 ರೂಪಾಯಿ ಗೆ ಕೊಡ್ತೀರ?', ಆತನನ್ನು ನೋಡುತ್ತಾ ಕೇಳಿದೆ.
'ಇಲ್ಲ ಸಾರ್, ಏನೂ ಸಿಕ್ಕೊಲ್ಲ ನಮಗೆ', ಆತ ಮಾವಿನ ಹಣ್ಣನ್ನು ನೋಡುತ್ತಾ ಹೇಳಿದ.
'ಸರಿ. ಬರ್ತೀನಿ', ಎಂದು ಮುಂದೆ ಹೊರಟೆ.
'ಸಾರ್, ಬನ್ನಿ ಸಾರ್' ಎಂದು ಆತ ಕೂಗಿದ್ದು ಕೇಳಿಸಿದರೂ ನಾನು ಹಿಂತಿರುಗಲಿಲ್ಲ.

'ಏಕೆ ಅಸ್ಟು ರಿಜಿಡ್ ಆಗಿ ವರ್ತಿಸಿದೆ?', ನನ್ನ ನಾಲಿಗೆ ನನ್ನ ಕೇಳಿತೋ ಎನಿಸಿತು.
'ಯೋ ಸುಮ್ನೆ ಇರು, ಕತ್ತಲೆ ಆಗುವುದರೊಳಗೆ ಮನೆ ಸೇರಿಬಿಡಬೇಕು', ಮನಸ್ಸು
ನಾಲಿಗೆಯನ್ನು ಗದರಿಸಿ ನನ್ನ ಮುಂದೆ ನಡೆಸಿತು.

'ಕತ್ತಲೆ ಆಗುವುದರೋಳಗಾಗಿ!', ಕತ್ತಲೆ!... 'ಎಸ್'.

ಬೈಕ್ ಸ್ಟಾರ್ಟ್ ಮಾಡಿ ಮನೆ ಕಡೆ ಹೊರಟಾಗ, ಏನೋ ಕಂಡು ಹಿಡಿದ ಕುಶಿ.
ಬೆಳಕಿಲ್ಲದಿದ್ದರೂ ಕಾಣಿಸುವ ವಸ್ತು ಕತ್ತಲೆ.

ಹಾಗೆಂದರೆ ತಪ್ಪಾದಿತು, ಎಂದಿತು ಮನಸ್ಸು.

ಏಕೆಂದರೆ, ಕತ್ತಲೆ ಒಂದು ವಸ್ತುವಲ್ಲ.
ಕತ್ತಲೆ ಒಂದು ಅರಿವು, ಕತ್ತಲೆ ಒಂದು ಜ್ಞಾನ, ಕತ್ತಲೆ ಒಂದು ನಿಜ. ಕತ್ತಲೆ ಒಂದು ರಹಸ್ಯ.
ಕತ್ತಲೆ ಇಲ್ಲದಿದ್ದಲ್ಲಿ ಬೆಳಕು ಇದ್ದೂ ಇಲ್ಲವಾಗುತಿತ್ತು.
ಬೆಳಕು ಕಾಣಿಸಲು ಕತ್ತಲೆಯೇ ಬೇಕಲ್ಲವೇ?

'ಹಾಳದ ಲಾರಿಯವನು , ಸೈಡ್ ಕೊಡ್ತಾ ಇಲ್ಲ', ಇನ್ನೊಮ್ಮೆ ಹಾರ್ನ್ ಮಾಡಿದೆ.
ಆತ ಮಿರರ್ ನಲ್ಲಿ ನನ್ನ ನೋಡುತ್ತಿರುವುದು, ಅದೇ ಮಿರರ್ ನಲ್ಲಿ ನನಗೆ ಕಾಣಿಸಿತು.
'ಇನ್ನೆಸ್ಟು ಜಾಗ ಬೇಕೋ ನಿಂಗೆ', ಯೆನ್ನುತ್ತಿರಬಹುದೇ?.
ಮುಂದೆ ಹೋದೆ. ಸಂಜೆಯ ಹೊತ್ತು ಬೈಕ್ ಓಡಿಸುವ ಮಜಾನೆ ಬೇರೆ.

ಮನೆಗೆ ಹೋಗಿ ಬೆಳಕು - ಕತ್ತಲೆ ಬಗ್ಗೆ ಅಪ್ಪನ ಹತ್ರ ಇನ್ನಸ್ಟು ಮಾತಾಡಬೇಕು.

ಕತ್ತಲಾಗುವುದರ ಒಳಗೆ ಮನೆಯಲ್ಲಿ ಇದ್ದೆ.
ಒಳಗೆ ಅಡಿ ಇಡುತ್ತಿದ್ದಂತೆ ಅಮ್ಮ ಕೇಳಿದರು,
'ಕರೆಂಟ್ ಬಿಲ್ ಕಟ್ಟಿದಿಯೇನೋ?'.
ಪೆಚ್ಚಾದ ನನ್ನ ಮುಕವನ್ನು, ಹಾಗೂ ಬೆಳಕನ್ನು, ಕತ್ತಲೆ ಆವರಿಸಿತು.

3 comments:

Abhijith Dev said...

ಬೆಳಕಿಲ್ಲದಿದ್ದರೂ ಕಾಣಿಸುವುದು ಅರಿವು, ಜ್ಞಾನ, ಸತ್ಯ ಮತ್ತು ರಹಸ್ಯ. ಬೆಳಕೇ ಒಂದು ಜ್ಞಾನ. ಎಲ್ಲರ ಒಳಗೂ ಬೆಳಕು ಇದ್ದೆ ಇರುತ್ತೆ. ಅದನ್ನು ಕಾಣಲು, ಅನುಭವಿಸಲು ಬೆಳಕಿನ ಜೊತೆಗೆ ಕತ್ತಲೆಯೂ ಅಗತ್ಯ.

Shashi said...

Haaa..Good Article maga... keep it up. :)

Ragu Kattinakere said...

idu padya vo gadya vo? good