'ಯಾರಪ್ಪ ಈ ಹುಡುಗಿ?' ಕಂಬಿಯಿಂದ ಇಣುಕುತ್ತಾ ತಮ್ಮನ ಹತ್ತಿರ ಕೇಳಿದ ಅಣ್ಣ.
ಬ್ಲೂ jeans, ವೈಟ್ ಟೀ ಶರ್ಟ್ ದರಿಸಿದ ಹುಡಗಿಯನ್ನ ನೋಡಿದ ತಮ್ಮ.
ಮೇಲಿನಿಂದ ಏನೋ ಬಿದ್ದ ಹಾಗೆ ಆಯಿತು, 'ಥೂ! ಮತ್ತೆ ಮೇಲಿನಿಂದ ಹಕ್ಕಿ ಹಿಕ್ಕೆ ಹಾಕಿದೆ!'.
ಅಣ್ಣ ಹೇಳಿದಾಗ, ತಮ್ಮ ಅದನ್ನು ಗಮನಿಸದೆ ಹುಡುಗಿಯತ್ತಲೇ ನೋಡುತಿದ್ದ.
ಬೆಂಗಳೂರ್. ಶನಿವಾರ, ಬೆಳಗ್ಗೆ 8 ಗಂಟೆ.
ಈ ಹುಡುಗಿಗಿಂತ ಸುಮಾರು 15 ನಿಮಿಷಗಳ ಮೊದಲು ಇಲ್ಲಿಗೆ ಬಂದೆವು.
ಇದಕ್ಕಿಂತಲೂ ಮೊದಲು, ಹಾಸ್ಟೆಲ್ ನಲ್ಲಿ ಎಷ್ಟು ಹಾಯಾಗಿ ಇದ್ದೆವು!
ಫ್ರೆಂಡ್ಸ್ ಗಳ ಜೊತೆಗೂಡಿ... ಆಹಾ, ಅದರ ಗಮ್ಮತ್ತೇ ಬೇರೆ!.
ನೆನ್ನೆ ರಾತ್ರಿ ಊಟ ಮಾಡಿ ಮಲಗುವ ವರೆಗೂ, ಯಾವುದೇ ಚಿಂತೆ ಇರಲಿಲ್ಲ.
ಹಾಳಾದ್ದು, ಬೆಳಗ್ಗೆ ಯಾವ ಗಳಿಗೆ ಯಲ್ಲಿ ಎದ್ದೆವೋ?
ನನ್ನನ್ನು, ನನ್ನ ಅಣ್ಣನನ್ನು, ನಮ್ಮ ಫ್ರೆಂಡ್ಸ್ ಗಳನ್ನು ಬಲವಂತವಾಗಿ ದೊಡ್ಡ ಆಟೋವೊಂದರ ಹಿಂದೆ ತುಂಬಿದರು.
ಅರ್ದ ಗಂಟೆಯ ನಂತರ, ನಮ್ಮನ್ನೆಲ್ಲ ತಂದು ಇಲ್ಲಿಟ್ಟರು.
ತಮ್ಮನ ಯೋಚನೆ, ಆ ಹುಡುಗಿಯ ಸುಂದರ ಕಣ್ಣೊಳಗಿನ ಮುಗ್ದತೆಯ ಆಳದಸ್ಟೆ ಅಳಕ್ಕೆ ಹೋಗಿತ್ತು.
ದಡಕ್ಕನೆ ತೆರೆದ ಬಾಗಿಲಿನ ಸದ್ದಿನಿಂದ ವಾಸ್ತವಕ್ಕೆ ಬಂದ ತಮ್ಮ.
ಅಣ್ಣ, ಇನ್ನೂ ತಲೆಯ ಮೇಲೆ ಬಿದ್ದ ಹಿಕ್ಕೆಯಿಂದ ಡಿಸ್ಟರ್ಬ್ ಆದವನು ಚೇತರಿಸಿಕೊಂಡಿರಲಿಲ್ಲ.
ಹಟಾತ್ತಾಗಿ ಬಂದ ಕೈಯೊಂದು, ತಮ್ಮನ ಕತ್ತನ್ನು ಹಿಡಿದು ಹೊರಗೆಳೆಯಿತು.
ಇದನ್ನು ಅಣ್ಣ ದಂಗಾಗಿ ನೋಡುತಿದ್ದ!
ಆ ಕೈಯ ತಲೆಗೆ ಏನೆನಿಸಿತೋ, ತಮ್ಮನನ್ನು ಮತ್ತೆ ಒಳಗೆ ನೂಕಿ,
ಅಣ್ಣನ ಕತ್ತು ಹಿಡಿದು ಹೊರಗೆಳೆದು ಆ ಹುಡುಗಿಗೆ ತೋರಿಸಿತು.
ಹುಡುಗಿಯ ಕಣ್ಣಲ್ಲಿನ ತೃಪ್ತಿಯನ್ನು ತಮ್ಮ, ಆದ ಆಘಾತದಿಂದ ಸಾವರಿಸಿಕೊಳ್ಳುತ್ತ ಗಮನಿಸಿದ.
ಕಿರಿಚಿಕೊಳ್ಳುತ್ತಿದ್ದ ಅಣ್ಣನನ್ನು ಅದೇ ಕೈ, ಇನ್ನೊಂದು ರೂಮಿಗೆ ತೆಗೆದುಕೊಂಡು ಹೋಯಿತು.
ಸ್ವಲ್ಪ ಹೊತ್ತಿನ ನಂತರ ಅಣ್ಣ ಕಿರಿಚುವುದನ್ನು ನಿಲ್ಲಿಸಿದ.
ಅಬ್ಬ, ಅಣ್ಣನನ್ನು ಬಿಟ್ಟು ಬಿಟ್ಟರು ಎಂದುಕೊಂಡ ತಮ್ಮನಿಗೆ, ಸ್ವಲ್ಪ ನಂತರ ಅಲ್ಲಿಂದ ಮರೆಯಾದ ಹುಡುಗಿಯ ಕೈಯಲ್ಲಿನ
ಪಾರ್ಸೆಲ್ ನಲ್ಲಿ, ಅಣ್ಣ ಹತನಾಗಿ ಶವವಾಗಿ ಮಲಗಿದ್ದು ಗೊತ್ತೇ ಆಗಲಿಲ್ಲ!!