Monday, September 13, 2010

Verity 9 - ದಾಹ

ಟೋನಿಗೆ ತುಂಬಾ ಬಾಯಾರಿಕೆಯಾಗಿತ್ತು.

‘ಮುಂದೆ ಸಿಗುವುದೇ ಬೀರೂರ್. ಅಲ್ಲಿ ಬೈಕ್ ನಿಲ್ಲಿಸಿ ಏನಾದರೂ ಕೋಲ್ಡ್ ಡ್ರಿಂಕ್ಸ್ ಕುಡಿಯಬೇಕು! ಬೆಂಗಳೂರು ಬಿಡುವಾಗ, ಅರ್ಜೆಂಟಲ್ಲಿ ವಾಟರ್ ಬಾಟಲ್ ಮರೆತುಬಿಟ್ಟೆ. ಏನೋ ಮರೆತನಲ್ಲ ಎಂದು ಮನಸ್ಸು ಆಗಲೇ ಎಚ್ಚರಿಸಿತ್ತು. ಒಂದು ಕ್ಷಣ ಅಲ್ಲೇ ನಿಂತು ನೆನಪಿಸಲು ಪ್ರಯತ್ನಪಟ್ಟೆ. ಆಗ ನೆನಪಾಗಿದ್ದರೆ, ಈಗ ಈ ಸ್ಥಿತಿ ಬರುತ್ತಿರಲಿಲ್ಲ!’

‘ಇನ್ನೂ 2 ಕಿಲೋಮೀಟರ್. ಎಸ್ಟೊಂದು ದಾಹ! ಸುಡುವ ಸನ್ರೇಸ್ ಬಾಡಿಲಿ ಇರೋ ನೀರನೆಲ್ಲ ಕರಗಿಸುತ್ತಾ ಇದೆ. ಬಿಸಿ ಗಾಳಿಗೆ ಬೆವರು ಕೂಡ ಕರಗುತ್ತಾ ಇದೆ. ಟ್ರೈನಲ್ಲಿ ಬರಬಹುದಿತ್ತು, ಯಾಕಾದರೂ ಬೈಕ್ ನೆನಪಾಯಿತೋ. ಜಸ್ಟ್ 5 ಕಿಲೋಮೀಟರ್ ಬ್ಯಾಕ್, ಫ್ರೆಶ್ ಎಳನೀರು ಇಟ್ಟಿದ್ದರು! ಅದನ್ನು ನೋಡಿದ ಮೇಲೆ ತಾನೇ, ನನಗೆ ಬಾಯಾರಿಕೆಯಾಗಿದ್ದು!’

ಟೋನಿ accelerator ಅನ್ನು ಇನ್ನೂ ತಿರುಗಿಸಿದ.

ಬಿರೂರ್ ಸಿಟಿ. ಟೋನಿಗೆ ಹೋದ ಜೀವ ಬಂದಂತಾಯಿತು. ಯಾವ ಶಾಪ್ ಬಳಿ ನಿಲ್ಲಿಸಲಿ ಎನ್ನುವುದೇ ಪ್ರಶ್ನೆ!

‘ಈ summer ಸೆಖೆಗೆ ಬೀರೂರ್ ಕೂಡ ಬೆವರಿದೆ!, ಕೊಳಕು ಸಿಟಿ. ಎಲ್ಲಿ ನೋಡಿದರೂ ಗಲೀಜು! ಈ ಶಾಪ್ ಓಕೆ. ಅಂಗಡಿಯವನು ನಾನು ಬೈಕ್ ಪಾರ್ಕ್ ಮಾಡುವುದನ್ನೇ ನೋಡುತ್ತಾ ಇದ್ದಾನೆ’. ಒಂದು ಸ್ಮೈಲ್ ಬೀಸಾಕಿದ ಟೋನಿ.

‘’ಕೋಲ್ಡ್ ಡ್ರಿಂಕ್ಸ್ ಏನಿದೆ?’’, ಟೋನಿ ಕೇಳಿದ.

‘‘ಒಹ್! ಕನ್ನಡ ಬರುತ್ತಾ?, Pespi, Colacola, ಯಾವುದು ಕೊಡಲಿ?’’ ಅಂಗಡಿಯವನು ಕೇಳಿದ.

ಟೋನಿ ಇರುವುದೇ ಹಾಗೆ. ಗೊತ್ತಿಲ್ಲದವರು ಆತನನ್ನು foreigner ಅಂತಲೇ ಭಾವಿಸುತ್ತಿದ್ದರು. ಕಡುಕಪ್ಪಾಗಿದ್ದ ತಲೆಕೂದಲು ಒಂದು ಕ್ಷಣ ಆತ Indian ಎಂಬ ಸಂದೇಹ ಮೂಡಿಸಿದರೂ, ಹಾಕಿಕೊಂಡಿದ್ದ ಡ್ರೆಸ್ ಹಾಗೂ ಗ್ಲಾಸ್ ಅವರನ್ನು ತಪ್ಪುದಾರಿಗೆ ಎಳಿಯುತ್ತಿತ್ತು.

ಅಂಗಡಿಯವನು ಕೇಳಿದ ಪ್ರಶ್ನೆಯ first half ಬಗ್ಗೆ ಟೋನಿ ತಲೆ ಕೆಡಿಸಿಕೊಳ್ಳಲಿಲ್ಲ. ಉಳಿದಿರುವುದು second half.

Pespi or Colacola?

ಟೋನಿ ಸಂದಿಗ್ದತೆ (ambiguity) ಗೆ ಸಿಲುಕಿದ. ಆದರೆ ಅವನ ಯೋಚನೆ ‘ಯಾವುದು ತಗೋಳೋದು?’ ಅಂತ ಆಗಿರಲಿಲ್ಲ! ಅದಕಿನ್ತಲೂ ಯೋಚಿಸಬೇಕಾದ ಸಂಗತಿ ಅಲ್ಲಿ arise ಆಗಿತ್ತು!

‘ಎರಡು ವರ್ಷದ ಹಿಂದೆ pesticide ಇದೆ ಅಂತ ಸುದ್ದಿಯಾಗಿತ್ತು. ಈಗ ನಾನಿರುವುದು ಅದೇ chemicals ಮುಂದೆ! ಇದು ಯಾರೋ ಕಿಡಿಗೇಡಿಗಳು ಹಬ್ಬಿಸಿದ ಸುದ್ದಿ ಇರಬಹುದು ಅಂದುಕೊಂಡಿದ್ದೆ. ಆದರೆ ಅಲ್ಲ. ಯಾರೋ court ನಲ್ಲಿ ಕೇಸ್ ಕೂಡ ಹಾಕಿಸಿದ್ದರು ಅಂತ ಸುದ್ದಿಯಾಗಿತ್ತು. ಕೊನೆಗೆ ಅದರ ingredients ಟೆಸ್ಟ್ ಮಾಡಲಿಕ್ಕಾಗಿ ಮೈಸೂರಿನ CFTRY ಲ್ಯಾಬ್ ಗೆ ಕಳುಹಿಸಿದರು. CFTRY ಅದನ್ನ test ಮಾಡಿಸಿ ಅದರಲ್ಲಿ chemicals ಇದೆ ಅಂತ ಇನ್ನೇನು ರಿಪೋರ್ಟ್ ಕೊಡುವುದರಲ್ಲಿ ಇತ್ತು. ಆದರೆ, ಸೆಂಟ್ರಲ್ ಮಿನಿಸ್ಟ್ರಿ CFTRY ಮೇಲೆ ಒತ್ತಡ ಹೇರಿ ಆ ರಿಪೋರ್ಟ್ ಚೇಂಜ್ ಮಾಡಿಸಿದ್ದರಿಂದ, ವಿಧಿ ಇಲ್ಲದೆ, CFTRY ಕೂಡ ಜನರನ್ನು ವಂಚಿಸಿತು!’

“ಏನ್ ಸಾರ್ ಯೋಚನೆ ಮಾಡ್ತಾ ಇದ್ದೀರಾ?”, ಅಂಗಡಿಯವನು ಕೇಳಿದ್ದು ಟೋನಿಗೆ ಕೇಳಿಸಲೇ ಇಲ್ಲ. ತನ್ನ ಯೋಚನೆಯನ್ನು ಹಾಗೆಯೇ ಹರಿಯಲು ಬಿಟ್ಟ.

‘ಇದು ನಾನು ಕೇಳಿದ ಸುದ್ದಿಯೇ ಹೊರತು ನನ್ನ ಬಳಿ ಸೂಕ್ತ ಆಧಾರ ಇಲ್ಲ. Corruption, Corruption every where. ಈ ವಿಷಯದ ಬಗ್ಗೆ fight ಮಾಡೋಣ ಅಂದರೆ ಬೇಕಾದ ಸಾಕ್ಷಿಯೇ ಇಲ್ಲ. I am helpless. ಅಷ್ಟಕ್ಕೂ ನನಗ್ಯಾಕೆ ಬೇಕು ಬೇಡದ ಉಸಾಬರಿ? ಛೆ! ಎಷ್ಟು ಸ್ವಾರ್ಥಿಯಾಗಿಬಿಟ್ಟಿದ್ದೀನಿ ನಾನು. Atleast ನನ್ನ ಫ್ರೆಂಡ್ಸ್ ಗಳಿಗಾದರು ಈ chemical drinks ಬಗ್ಗೆ ತಿಳುವಳಿಕೆ ನೀಡಬೇಕು. ಇಸ್ಟೊಂದು educated ಆಗಿ ಆರೋಗ್ಯದ ಬಗ್ಗೆ ಎಷ್ಟು ನಿರ್ಲಕ್ಷ್ಯ! ‘

‘‘ಸಾರ್!’’, ಅಂಗಡಿಯವನು ಮತ್ತೆ ಕೇಳಿದಾಗ ವಾಸ್ತವಕ್ಕೆ ಬಂದ ಟೋನಿ. ಬ್ಹಹುಶ, ವಾಸ್ತವದಿಂದ ಹೊರಬಂದ!

‘’ಎರಡೂ ಬೇಡ, ವಾಟರ್ ಬಾಟಲ್ ಕೊಡು.’’, ಟೋನಿಯ ಧ್ವನಿ demanding ಮತ್ತು ಕಚಿತವಾಗಿತ್ತು. ಅಲ್ಲಿ ಬೇರೆ ಪ್ರಶ್ನೆಗೆ ಅವಕಾಶವೇ ಇರಲಿಲ್ಲ. ಆದ್ದರಿಂದಲೇ ‘ಏಕೆ ಸಾರ್’ ಎಂದು ಕೇಳ ಹೊರಟಿದ್ದ ಅಂಗಡಿಯವನು ಹಾಗೆ ಮಾಡದೆ, ಟೋನಿಯ ಮುಂದೆ ವಾಟರ್ ಬಾಟಲ್ ತಂದಿಟ್ಟ.

ಟೋನಿಗೆ ಮರೆತು ಹೋಗಿದ್ದ ದಾಹ ಮತ್ತೆ ನೆನಪಾಯಿತು. Expiry ಡೇಟ್ ನೋಡುವುದಕ್ಕಾಗಿ ಬಾಟಲ್ ತೆಗೆದುಕೊಂಡ ಟೋನಿಗೆ ಅದರ ಮೇಲೆ ‘a product of colacola company’ ಎಂದು ಬರೆದಿದ್ದು ಕಾಣಿಸಿತು!